ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿನ್ನ, ಬೆಳ್ಳಿ ದರ ಮತ್ತೆ ಇಳಿಕೆ: 10 ಗ್ರಾಂ ಶುದ್ಧ ಬಂಗಾರಕ್ಕೆ ₹72,650

Published 24 ಮೇ 2024, 13:40 IST
Last Updated 24 ಮೇ 2024, 13:40 IST
ಅಕ್ಷರ ಗಾತ್ರ

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಸತತ ಮೂರನೇ ದಿನವಾದ ಶುಕ್ರವಾರವೂ ಚಿನ್ನ ಮತ್ತು ಬೆಳ್ಳಿ ಧಾರಣೆ ಇಳಿಕೆ ಕಂಡಿದೆ.

10 ಗ್ರಾಂನ 24 ಕ್ಯಾರೆಟ್‌ ಚಿನ್ನದ ದರ ₹900 ಕಡಿಮೆಯಾಗಿ ₹72,650 ಆಗಿದೆ. ಬೆಳ್ಳಿ ಧಾರಣೆಯು ಕೆ.ಜಿಗೆ ₹500 ಇಳಿದು ₹92,100ಕ್ಕೆ ಕುಸಿದಿದೆ. 

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯು ಒಂದು ಔನ್ಸ್‌ಗೆ (28.34 ಗ್ರಾಂ) ಕ್ರಮವಾಗಿ 2,340 ಡಾಲರ್‌ (ಅಂದಾಜು ₹1.94 ಲಕ್ಷ) ಮತ್ತು 30.45 ಡಾಲರ್‌ನಂತೆ (ಅಂದಾಜು ₹2,531) ಮಾರಾಟವಾಗಿದೆ.

‘ಅಮೆರಿಕದ ಫೆಡರಲ್‌ ರಿಸರ್ವ್‌ ಬಡ್ಡಿದರ ಕಡಿತಕ್ಕೆ ಇನ್ನೂ ನಿರ್ಧರಿಸಿಲ್ಲ. ಮತ್ತೊಂದೆಡೆ ಡಾಲರ್‌ ಸೂಚ್ಯಂಕ ಏರಿಕೆಯಾಗಿದೆ. ಹೂಡಿಕೆದಾರರು ಲಾಭ ಗಳಿಕೆಯತ್ತ ಚಿತ್ತ ನೆಟ್ಟಿದ್ದು, ಹಳದಿ ಲೋಹದ ಮಾರಾಟಕ್ಕೆ ಮುಂದಾಗಿದ್ದಾರೆ. ಹಾಗಾಗಿ, ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ’ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT