ಭಾನುವಾರ, ಜೂನ್ 26, 2022
22 °C

ತೆರಿಗೆ ರಹಿತವಾಗಿ ಕಚ್ಚಾ ಸೋಯಾಬೀನ್, ಸೂರ್ಯಕಾಂತಿ ಎಣ್ಣೆ ಆಮದಿಗೆ ಕೇಂದ್ರ ಅಸ್ತು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶೀಯ ಅಡುಗೆ ಎಣ್ಣೆ ಬೆಲೆಗಳನ್ನು ತಗ್ಗಿಸಲು ಕಚ್ಚಾ ಸೋಯಾಬೀನ್ ಮತ್ತು ಸೂರ್ಯಕಾಂತಿ ಎಣ್ಣೆಯ ವಾರ್ಷಿಕ 20 ಲಕ್ಷ ಟನ್‌ಗಳ ಆಮದು ಮೇಲಿನ ಕಸ್ಟಮ್ಸ್ ಸುಂಕ ಮತ್ತು ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್‌ಗೆ ಸರ್ಕಾರ ಮಂಗಳವಾರ ವಿನಾಯಿತಿ ನೀಡಿದೆ.

ತೆರಿಗೆ ರಹಿತವಾಗಿ ವರ್ಷಕ್ಕೆ 20 ಲಕ್ಷ ಟನ್ ಕಚ್ಛಾ ಸೋಯಾಬೀನ್ ಎಣ್ಣೆ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆ ಖರೀದಿಯು 2022-23, 2023-24ರ ಹಣಕಾಸು ವರ್ಷಕ್ಕೆ ಅನ್ವಯಿಸುತ್ತದೆ ಎಂದು ಹಣಕಾಸು ಸಚಿವಾಲಯ ಅಧಿಸೂಚನೆಯಲ್ಲಿ ತಿಳಿಸಿದೆ.

ವಿನಾಯಿತಿಯು ದೇಶೀಯ ಅಡುಗೆ ಎಣ್ಣೆ ಬೆಲೆಗಳನ್ನು ತಗ್ಗಿಸಿ, ಹಣದುಬ್ಬರವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತಿದೆ.

‘ಇದು ಗ್ರಾಹಕರಿಗೆ ಗಮನಾರ್ಹ ಪರಿಹಾರವನ್ನು ನೀಡುತ್ತದೆ’ಎಂದು ಸಿಬಿಐಸಿ ಟ್ವೀಟ್ ಮಾಡಿದೆ.

ಕಳೆದ ವಾರ ಏರುಗತಿಯಲ್ಲಿದ್ದ ತೈಲ ಬೆಲೆಗಳನ್ನು ನಿಯಂತ್ರಿಸಲು, ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿತ್ತು. ಉಕ್ಕು ಮತ್ತು ಪ್ಲಾಸ್ಟಿಕ್ ಉದ್ಯಮದಲ್ಲಿ ಬಳಸುವ ಕೆಲವು ಕಚ್ಚಾ ವಸ್ತುಗಳ ಮೇಲಿನ ಆಮದು ಸುಂಕವನ್ನು ಸಹ ತೆಗೆದು ಹಾಕಿತ್ತು. ಇದಲ್ಲದೆ, ಕಬ್ಬಿಣದ ಅದಿರು ಮತ್ತು ಕಬ್ಬಿಣದ ಪೆಲ್ಲೆಟ್ಸ್‌ಗಳ ಮೇಲಿನ ರಫ್ತು ಸುಂಕವನ್ನು ಹೆಚ್ಚಿಸಲಾಗಿತ್ತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು