ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‌ಕೊಬ್ಬರಿ ಎಂಎಸ್‌ಪಿ ₹250 ಏರಿಸಿದ ಕೇಂದ್ರ

Published 27 ಡಿಸೆಂಬರ್ 2023, 16:02 IST
Last Updated 27 ಡಿಸೆಂಬರ್ 2023, 16:02 IST
ಅಕ್ಷರ ಗಾತ್ರ

ನವದೆಹಲಿ: ದರ ಕುಸಿತದಿಂದ ಕಂಗಾಲಾಗಿರುವ ಕೊಬ್ಬರಿ ಬೆಳೆಗಾರರಿಗೆ ಅನುಕೂಲ ಕಲ್ಪಿಸಲು ಕೇಂದ್ರ ಸರ್ಕಾರವು, ಬುಧವಾರ 2024ರ ಋತುವಿಗೆ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಹೆಚ್ಚಿಸಿದೆ. 

ಒಂದು ಕ್ವಿಂಟಲ್‌ ಉಂಡೆ ಕೊಬ್ಬರಿಗೆ ₹250 ಹಾಗೂ ಹೋಳಾದ (ಮಿಲ್ಲಿಂಗ್‌) ಕೊಬ್ಬರಿಗೆ ₹300 ಹೆಚ್ಚಿಸಿದೆ. ಒಂದು ಕ್ವಿಂಟಲ್‌ ಉಂಡೆ ಕೊಬ್ಬರಿಗೆ ₹12 ಸಾವಿರ ಹಾಗೂ ಹೋಳಾದ ಕೊಬ್ಬರಿಗೆ ₹11,160 ಬೆಂಬಲ ಬೆಲೆ ನಿಗದಿಪಡಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆಯು ಈ ನಿರ್ಧಾರ ಕೈಗೊಂಡಿದೆ.

ಕಳೆದ ಒಂದು ದಶಕದಿಂದಲೂ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಲಾಗುತ್ತಿದೆ. 2014–15ರಲ್ಲಿ ಹೋಳು ಕೊಬ್ಬರಿಗೆ ಎಂಎಸ್‌ಪಿ ₹5,250 ಇತ್ತು. ಉಂಡೆ ಕೊಬ್ಬರಿಗೆ ₹5,550 ಇತ್ತು. 2024–25ನೇ ವರ್ಷದಲ್ಲಿ ಎಂಎಸ್‌ಪಿಯನ್ನು ಹೋಳು ಕೊಬ್ಬರಿಗೆ ₹11,160 ಮತ್ತು ಉಂಡೆ ಕೊಬ್ಬರಿಗೆ ₹12,000ಕ್ಕೆ ಏರಿಕೆ ಮಾಡಲಾಗಿದೆ ಎಂದು ಸರ್ಕಾರ ಹೇಳಿದೆ. 

1.33 ಲಕ್ಷ ಟನ್‌ ಖರೀದಿ

2023ರ ಋತುವಿನಲ್ಲಿ ಕೇಂದ್ರ ಸರ್ಕಾರವು ಬೆಂಬಲ ಬೆಲೆ ಯೋಜನೆಯಡಿ 90 ಸಾವಿರ ರೈತರಿಂದ 1.33 ಲಕ್ಷ ಟನ್‌ ಕೊಬ್ಬರಿ ಖರೀದಿಸಿದೆ. ಇದಕ್ಕಾಗಿ ₹1,493 ಕೋಟಿ ವ್ಯಯಿಸಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಖರೀದಿಯು ಶೇ 227ರಷ್ಟು ಹೆಚ್ಚಳವಾಗಿದೆ ಎಂದು ವಿವರಿಸಿದೆ.

ರಾಷ್ಟ್ರೀಯ ಸಹಕಾರ ಗ್ರಾಹಕರ ಮಹಾಮಂಡಳ (ಎನ್‌ಸಿಸಿಎಫ್‌) ಮತ್ತು ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟವು (ನಾಫೆಡ್) ಕೊಬ್ಬರಿ ಖರೀದಿಸುವ ನೋಡಲ್‌ ಏಜೆನ್ಸಿಗಳಾಗಿವೆ. ಬೆಲೆ ಪ್ರೋತ್ಸಾಹ ಯೋಜನೆಯಡಿ ಕೊಬ್ಬರಿ ಮತ್ತು ಸಿಪ್ಪೆ ಸುಲಿದ ತೆಂಗಿನ ಕಾಯಿಯನ್ನು ಖರೀದಿಸುತ್ತವೆ. 

ಹೋಳಾದ ಕೊಬ್ಬರಿಯು ಹೆಚ್ಚಾಗಿ ತೈಲ ಉತ್ಪಾದನೆಗೆ ಬಳಕೆಯಾಗುತ್ತದೆ. ಕೇರಳ ಮತ್ತು ತಮಿಳುನಾಡಿನಲ್ಲಿ ಕೊಬ್ಬರಿ ಉತ್ಪಾದನೆ ಹೆಚ್ಚಿದೆ. ಕರ್ನಾಟಕದಲ್ಲಿ ಹೆಚ್ಚಾಗಿ ಉಂಡೆ ಕೊಬ್ಬರಿ ಉತ್ಪಾದನೆಯಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT