ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಲ್‌ ಕರೆನ್ಸಿ ಸುಧಾರಣೆಗೆ ಒತ್ತು: ನಿರ್ಮಲಾ

Published 25 ಜನವರಿ 2024, 15:33 IST
Last Updated 25 ಜನವರಿ 2024, 15:33 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ ಮತ್ತು ಕೇಂದ್ರ ಸರ್ಕಾರವು, ಕೇಂದ್ರೀಯ ಬ್ಯಾಂಕ್‌ನ ಡಿಜಿಟಲ್‌ ಕರೆನ್ಸಿಯ (ಸಿಬಿಡಿಸಿ) ಸುಧಾರಣೆಯಲ್ಲಿ ತೊಡಗಿವೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಗುರುವಾರ ನಡೆದ ಹಿಂದೂ ಕಾಲೇಜಿನ 125ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ‘ಡಿಜಿಟಲ್‌ ಕರೆನ್ಸಿಯು ಗಡಿಯಾಚೆಗಿನ ಪಾವತಿಗಳಿಗೂ ನೆರವಾಗಲಿದೆ ಎಂದು ಬಲವಾಗಿ ನಂಬಿದ್ದೇವೆ. ಅಲ್ಲದೇ, ಹಣಕಾಸು ವ್ಯವಹಾರದಲ್ಲಿ ಪಾರದರ್ಶಕತೆಗೂ ಸಹಕಾರಿಯಾಗಲಿದೆ’ ಎಂದು ಹೇಳಿದರು.

‘ಡಿಜಿಟಲ್‌ ಕರೆನ್ಸಿಯಿಂದ ಕಡಿಮೆ ಖರ್ಚಿನಲ್ಲಿ ಪಾವತಿಯ ವೇಗ ಹೆಚ್ಚಲಿದೆ. ಆಂತರಿಕ ಮತ್ತು ಹೊರ ಭಾಗಕ್ಕೆ ಹಣ ರವಾನೆಯ ಖರ್ಚು ಕೂಡ ತಗ್ಗಲಿದೆ’ ಎಂದು ತಿಳಿಸಿದರು.

ಆರ್‌ಬಿಐ ಪ್ರಾರಂಭದಲ್ಲಿ ಸಗಟು ವಹಿವಾಟು ವಿಭಾಗದಲ್ಲಿ ಪ್ರಾಯೋಗಿಕವಾಗಿ ಡಿಜಿಟಲ್ ರೂಪಾಯಿಯನ್ನು ಬಿಡುಗಡೆಗೊಳಿಸಿತ್ತು. ಎಸ್‌ಬಿಐ, ಬ್ಯಾಂಕ್ ಆಫ್‌ ಬರೋಡ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರ ಬ್ಯಾಂಕ್, ಯೆಸ್ ಬ್ಯಾಂಕ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಮತ್ತು ಎಚ್‌ಎಸ್‌ಬಿಸಿ ಸಗಟು ವಹಿವಾಟಿಗೆ ಡಿಜಿಟಲ್ ರೂಪಾಯಿಯನ್ನು ನೀಡುತ್ತವೆ.

2022ರ ಡಿಸೆಂಬರ್ 1ರಿಂದ ಚಿಲ್ಲರೆ ವಹಿವಾಟು ವಿಭಾಗದಲ್ಲಿಯೂ ಡಿಜಿಟಲ್‌ ಅಥವಾ ಇ–ರುಪಿಯ ಬಳಕೆಗೆ ಚಾಲನೆ ನೀಡಿತ್ತು.

ಅಭಿವೃದ್ಧಿಗೆ ಒತ್ತು:

ಕೇಂದ್ರ ಸರ್ಕಾರವು ವಿಕಸಿತ ಭಾರತ ಆಶಯದಡಿ ಉತ್ಪಾದನಾ ಮತ್ತು ಕೃಷಿ ವಲಯಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದೆ. ಕೊಯ್ಲಿನ ನಂತರ ಆಧುನಿಕ ತಂತ್ರಜ್ಞಾನದ ಬಳಕೆ ಬಗ್ಗೆ ರೈತರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು.

ನವೀಕರಿಸಬಹುದಾದ ಇಂಧನ, ಸೆಮಿಕಂಡಕ್ಟರ್‌, ಮೆಷಿನ್ ಲರ್ನಿಂಗ್‌, ಭೂವಿಜ್ಞಾನ, ಬಾಹ್ಯಾಕಾಶ ಸೇರಿದಂತೆ 13 ಉತ್ಪಾದನಾ ವಲಯಗಳ ಅಭಿವೃದ್ಧಿಗೆ ಕ್ರಮವಹಿಸಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT