ಬೆಂಗಳೂರು/ನವದೆಹಲಿ: ವಾಹನ ತಯಾರಿಕಾ ಕಂಪನಿಗಳಾದ ಮಹೀಂದ್ರ ಆ್ಯಂಡ್ ಮಹೀಂದ್ರ, ರೆನೊ ಮತ್ತು ಟೊಯೊಟ ಕಿರ್ಲೋಸ್ಕರ್ ಮೋಟರ್ ತಮ್ಮ ವಾಹನಗಳ ಬೆಲೆ ಕಡಿತಗೊಳಿಸಿವೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 3ರಂದು ನಡೆದ ಜಿಎಸ್ಟಿ ಮಂಡಳಿ ಸಭೆಯು ವಾಹನಗಳ ಮೇಲಿನ ತೆರಿಗೆಯನ್ನು ತಗ್ಗಿಸಿದೆ. ಈ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಕಂಪನಿಗಳು ವಾಹನಗಳ ಬೆಲೆಯನ್ನು ಕಡಿಮೆ ಮಾಡಿವೆ.

ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿಯು ತನ್ನ ಪ್ರಯಾಣಿಕ ವಾಹನಗಳ ಬೆಲೆಯನ್ನು ₹1.56 ಲಕ್ಷದವರೆಗೆ ಕಡಿಮೆ ಮಾಡಿದೆ. ಪರಿಷ್ಕೃತ ದರವನ್ನು ತನ್ನ ಡೀಲರ್ಗಳು ಮತ್ತು ಡಿಜಿಟಲ್ ವೇದಿಕೆಗಳಲ್ಲಿ ನವೀಕರಿಸಿದೆ. ಹೊಸ ದರವು ಸೆಪ್ಟೆಂಬರ್ 6ರಿಂದಲೇ ಜಾರಿಗೆ ಬಂದಿದೆ ಎಂದು ಕಂಪನಿ ಶನಿವಾರ ತಿಳಿಸಿದೆ.

ಕಂಪನಿಯು ತನ್ನ ಬೊಲೆರೊ/ನಿಯೊ ಶ್ರೇಣಿಯ ವಾಹನಗಳ ಬೆಲೆಯನ್ನು ₹1.27 ಲಕ್ಷದಷ್ಟು ಕಡಿಮೆ ಮಾಡಿದೆ. ಎಕ್ಸ್ಯುವಿ3ಎಕ್ಸ್ಒ (ಪೆಟ್ರೋಲ್) ₹1.4 ಲಕ್ಷ, ಎಕ್ಸ್ಯುವಿ3ಎಕ್ಸ್ಒ (ಡೀಸೆಲ್) ₹1.56 ಲಕ್ಷ, ಥಾರ್ 2 ಡಬ್ಲ್ಯುಡಿ (ಡೀಸೆಲ್) ₹1.35 ಲಕ್ಷ, ಥಾರ್ 4 ಡಬ್ಲ್ಯುಡಿ (ಡೀಸೆಲ್) ₹1.01 ಲಕ್ಷ ಮತ್ತು ಸ್ಕಾರ್ಪಿಯೊ ಕ್ಲಾಸಿಕ್ ವಾಹನದ ದರವನ್ನು ₹1.01 ಲಕ್ಷದಷ್ಟು ಕಡಿಮೆ ಮಾಡಿದೆ.

ಸ್ಕಾರ್ಪಿಯೊ–ಎನ್ ₹1.45 ಲಕ್ಷ, ಥಾರ್ ರಾಕ್ಸ್ ₹1.33 ಲಕ್ಷ ಮತ್ತು ಎಕ್ಸ್ಯುವಿ700 ವಾಹನದ ಬೆಲೆ ₹1.43 ಲಕ್ಷದಷ್ಟು ಇಳಿಕೆ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ.

ರೆನೊ ದರ ಇಳಿಕೆ: ಫ್ರಾನ್ಸ್ ಮೂಲದ ಕಾರು ತಯಾರಿಕಾ ಕಂಪನಿ ರೆನೊ ಇಂಡಿಯಾ ತನ್ನ ವಾಹನಗಳ ಬೆಲೆಯನ್ನು ₹96,395ರವರೆಗೆ ಇಳಿಕೆ ಮಾಡಿದೆ. ಹೊಸ ದರವು ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿದೆ ಎಂದು ಕಂಪನಿ ತಿಳಿಸಿದೆ.

ಗ್ರಾಹಕರು ಹೊಸ ದರದ ಪ್ರಕಾರ ಕಾರುಗಳನ್ನು ಕಂಪನಿಯ ಎಲ್ಲ ಡೀಲರ್ಗಳ ಬಳಿ ಈಗಿನಿಂದಲೇ ಬುಕಿಂಗ್ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದೆ. ಕ್ವಿಡ್ ಮಾದರಿಯ ವಾಹನದ ದರವನ್ನು ಕಂಪನಿಯು ₹55,095ರಷ್ಟು ಕಡಿಮೆ ಮಾಡಿದೆ. ಟ್ರೈಬರ್ ₹80,195 ಮತ್ತು ಕೈಗರ್ ವಾಹನ ಬೆಲೆ ₹96,395ರವರೆಗೆ ಇಳಿಕೆ ಆಗಿದೆ.

‘ಜಿಎಸ್ಟಿ ದರ ಇಳಿಕೆಯ ಪ್ರಯೋಜನವನ್ನು ನಮ್ಮ ಗ್ರಾಹಕರಿಗೆ ವರ್ಗಾಯಿಸಲು ನಿರ್ಧರಿಸಿದ್ದೇವೆ. ಇದು ಗ್ರಾಹಕರಿಗೆ ಕಾರುಗಳು ಕೈಗೆಟಕುವಂತೆ ಮಾಡಲಿದೆ. ಜೊತೆಗೆ ಹಬ್ಬದ ಋತುವಿನಲ್ಲಿ ವಾಹನಗಳಿಗೆ ಬೇಡಿಕೆಯನ್ನು ಹೆಚ್ಚಿಸುವ ನಿರೀಕ್ಷೆ ಇದೆ’ ಎಂದು ರೆನೊ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ವೆಂಕಟ್ರಾಮ್ ಎಂ. ಹೇಳಿದ್ದಾರೆ.

ಟೊಯೊಟ ಬೆಲೆ ₹3.49 ಲಕ್ಷದವರೆಗೆ ಇಳಿಕೆ: ಟೊಯೊಟ ಕಿರ್ಲೋಸ್ಕರ್ ಮೋಟರ್ (ಟಿಕೆಎಂ) ತನ್ನ ವಾಹನಗಳ ಬೆಲೆಯನ್ನು ₹3.49 ಲಕ್ಷದವರೆಗೆ ಕಡಿಮೆ ಮಾಡಿದೆ. ಪರಿಷ್ಕೃತ ದರವು ಇದೇ 22ರಿಂದ ಜಾರಿಗೆ ಬರಲಿದೆ.

ಗ್ಲಾನ್ಜಾ ಹ್ಯಾಚ್ಬ್ಯಾಕ್ ವಾಹನದ ಬೆಲೆ ₹85,300 ಇಳಿಕೆ ಆಗಿದೆ. ಟೈಸರ್ ₹1.11 ಲಕ್ಷ, ರೂಮಿಯನ್ ₹48,700, ಹೈರೈಡರ್ ₹65,400, ಕ್ರಿಸ್ಟಾ ₹1.80 ಲಕ್ಷ, ಹೈಕ್ರಾಸ್ ₹1.15 ಲಕ್ಷ ಮತ್ತು ಫಾರ್ಚುನರ್ ಕಾರಿನ ಬೆಲೆಯನ್ನು ₹3.49 ಲಕ್ಷ ತಗ್ಗಿಸಿದೆ.

ಲೆಜೆಂಡರ್ ₹3.34 ಲಕ್ಷ, ಹಿಲಕ್ಸ್ ₹2.52 ಲಕ್ಷ, ಕ್ಯಾಮ್ರಿ ₹1.01 ಲಕ್ಷ ಮತ್ತು ವೆಲ್ಫೈರ್ ಬೆಲೆ ₹2.78 ಲಕ್ಷ ತಗ್ಗಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಟಾಟಾ ಮೋಟರ್ಸ್ ತನ್ನ ವಾಹನಗಳ ಬೆಲೆಯನ್ನು ₹65 ಸಾವಿರದಿಂದ ₹1.55 ಲಕ್ಷ ದವರೆಗೆ ಈಗಾಗಲೇ ಕಡಿಮೆ ಮಾಡಿದೆ. ದರ ಪರಿಷ್ಕರಣೆಯು ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿದೆ ಎಂದು ಟಾಟಾ ಮೋಟರ್ಸ್ ಕಂಪನಿಯು ಶುಕ್ರವಾರ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.