ಶನಿವಾರ, ಅಕ್ಟೋಬರ್ 24, 2020
18 °C

ತಲಾವಾರು ಜಿಡಿಪಿ: ಭಾರತವನ್ನು ಹಿಂದಿಕ್ಕಲಿರುವ ಬಾಂಗ್ಲಾ

ಅನ್ನಪೂರ್ಣಾ ಸಿಂಗ್ Updated:

ಅಕ್ಷರ ಗಾತ್ರ : | |

ನವದೆಹಲಿ: ತಲಾವಾರು ಒಟ್ಟು ಆಂತರಿಕ ಉತ್ಪಾದನೆಯಲ್ಲಿ (ಜಿಡಿಪಿ) ಬಾಂಗ್ಲಾದೇಶವು ಈ ವರ್ಷದಲ್ಲಿ ಭಾರತವನ್ನು ಹಿಂದಿಕ್ಕಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಸಿದ್ಧಪಡಿಸಿರುವ ವಿಶ್ವ ಆರ್ಥಿಕ ಮುನ್ನೋಟ ವರದಿಯಲ್ಲಿ ಹೇಳಲಾಗಿದೆ.

ಬಾಂಗ್ಲಾದೇಶದ ತಲಾವಾರು ಜಿಡಿಪಿ ಶೇಕಡ 4ರಷ್ಟು ಹೆಚ್ಚಳವಾಗಿ, 1,888 ಡಾಲರ್‌ (₹ 1.38 ಲಕ್ಷ) ತಲುಪಲಿದೆ. ಇದೇ ವೇಳೆ, ಭಾರತದ ತಲಾವಾರು ಜಿಡಿಪಿಯಲ್ಲಿ ಶೇಕಡ 10.5ರಷ್ಟು ಕುಸಿತ ಆಗಲಿದ್ದು ಅದು 1,877 ಡಾಲರ್‌ (1.37 ಲಕ್ಷ) ಆಗಲಿದೆ. ಇದರ ಪರಿಣಾಮವಾಗಿ ದಕ್ಷಿಣ ಏಷ್ಯಾದಲ್ಲಿ ಭಾರತವು ಮೂರನೆಯ ಅತ್ಯಂತ ಬಡ ರಾಷ್ಟ್ರ ಎಂಬ ಹಣೆಪಟ್ಟಿ ಹೊತ್ತುಕೊಳ್ಳಲಿದೆ. ದಕ್ಷಿಣ ಏಷ್ಯಾದಲ್ಲಿ ನೇಪಾಳ ಮತ್ತು ಪಾಕಿಸ್ತಾನ ಮಾತ್ರ ಭಾರತಕ್ಕಿಂತ ಕಡಿಮೆ ತಲಾವಾರು ಜಿಡಿಪಿ ಹೊಂದಿದ ದೇಶಗಳಾಗಲಿವೆ.

ಬಾಂಗ್ಲಾದೇಶ, ಭೂತಾನ್, ಶ್ರೀಲಂಕಾ, ಮಾಲ್ಡೀವ್ಸ್‌ ಭಾರತಕ್ಕಿಂತ ಮುಂದೆ ಇರಲಿವೆ. ಆದರೆ, ಮುಂದಿನ ವರ್ಷದಲ್ಲಿ ಭಾರತದ ಅರ್ಥ ವ್ಯವಸ್ಥೆಯು ಚೇತರಿಕೆ ಕಂಡುಕೊಳ್ಳಲಿದ್ದು, ಇದರ ಪರಿಣಾಮವಾಗಿ ದೇಶದ ತಲಾವಾರು ಜಿಡಿಪಿ ಬಾಂಗ್ಲಾದೇಶದ್ದಕ್ಕಿಂತ ತುಸು ಹೆಚ್ಚುವ ಸಾಧ್ಯತೆ ಇದೆ ಎಂದು ಐಎಂಎಫ್‌ ಅಂದಾಜಿಸಿದೆ.

2021ರಲ್ಲಿ ಭಾರತದ ತಲಾವಾರು ಜಿಡಿಪಿ ಡಾಲರ್‌ ಲೆಕ್ಕಾಚಾರದಲ್ಲಿ ಶೇಕಡ 8.2ರಷ್ಟು ಹೆಚ್ಚಳ ಆಗಲಿದೆ. ಬಾಂಗ್ಲಾದೇಶದ ತಲಾವಾರು ಜಿಡಿಪಿಯಲ್ಲಿ ಶೇಕಡ 5.4ರಷ್ಟು ಹೆಚ್ಚಳ ಕಂಡುಬರಲಿದೆ.

ಐದು ವರ್ಷಗಳ ಹಿಂದೆ ಭಾರತದ ತಲಾವಾರು ಜಿಡಿಪಿ ಬಾಂಗ್ಲಾದೇಶದ ತಲಾವಾರು ಜಿಡಿಪಿಗಿಂತ ಶೇಕಡ 40ರಷ್ಟು ಹೆಚ್ಚು ಇತ್ತು. ಆದರೆ, ಅಲ್ಲಿಂದ ನಂತರ ಬಾಂಗ್ಲಾದೇಶದ ತಲಾವಾರು ಜಿಡಿಪಿಯು ವಾರ್ಷಿಕ ಶೇಕಡ 9.1ರ ದರದಲ್ಲಿ ಹೆಚ್ಚಳವಾಗಿದೆ. ಈ ಅವಧಿಯಲ್ಲಿ ಭಾರತದ ತಲಾವಾರು ಜಿಡಿಪಿ ವೃದ್ಧಿ ದರ ಶೇ 3.2ರಷ್ಟಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು