ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದಾನಿ ಸಮೂಹಕ್ಕೆ ‘ಸೀಮಿತ’ ಸಾಲ

Last Updated 27 ಜನವರಿ 2023, 15:26 IST
ಅಕ್ಷರ ಗಾತ್ರ

ಮುಂಬೈ: ಭಾರತದ ಬ್ಯಾಂಕ್‌ಗಳು ಅದಾನಿ ಸಮೂಹಕ್ಕೆ ನೀಡಿರುವ ಸಾಲದ ಮೊತ್ತವು ‘ನಿಭಾಯಿಸಬಹುದಾದ ಮಿತಿ’ಯಲ್ಲಿ ಇದೆ ಎಂದು ಸಿಎಲ್‌ಎಸ್‌ಎ ಹಾಗೂ ಜೆಫರೀಸ್‌ ಬ್ರೋಕರೇಜ್ ಸಂಸ್ಥೆಗಳು ಅಂದಾಜಿಸಿವೆ.

‘ಕೆಲವು ಬೆಳವಣಿಗೆಗಳನ್ನು ನಾವು ಗಮನಿಸುತ್ತಿದ್ದೇವೆ. ಆದರೆ ದೇಶದ ಬ್ಯಾಂಕಿಂಗ್ ವಲಯಕ್ಕೆ ಯಾವುದೇ ಕೆಟ್ಟ ಪರಿಣಾಮ ಎದುರಾಗುವ ಸಾಧ್ಯತೆ ನಮಗೆ ಕಾಣುತ್ತಿಲ್ಲ’ ಎಂದು ಜೆಫರೀಸ್‌ ಹೇಳಿದೆ. ಜೆಫರೀಸ್‌ ಸಂಸ್ಥೆಯ ಪ್ರಕಾರ ಅದಾನಿ ಸಮೂಹದ ಒಟ್ಟು ಸಾಲವು ದೇಶದ ಬ್ಯಾಂಕಿಂಗ್ ವ್ಯವಸ್ಥೆ ನೀಡಿರುವ ಒಟ್ಟು ಸಾಲದ ಶೇಕಡ 0.5ರಷ್ಟು.

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಈ ಸಮೂಹಕ್ಕೆ ನೀಡಿರುವ ಸಾಲದ ಮೊತ್ತವು ಅವುಗಳ ಒಟ್ಟು ಸಾಲದ ಶೇ 0.7ರಷ್ಟು ಮಾತ್ರ, ಖಾಸಗಿ ಬ್ಯಾಂಕ್‌ಗಳು ನೀಡಿರುವ ಸಾಲವು ಅವುಗಳ ಒಟ್ಟು ಸಾಲದ ಶೇ 0.3ರಷ್ಟು ಮಾತ್ರ ಎಂದು ಜೆಫರೀಸ್ ವಿವರಿಸಿದೆ.

ಅದಾನಿ ಸಮೂಹವು ಭಾರತದ ಬ್ಯಾಂಕ್‌ಗಳಿಂದ ಪಡೆದಿರುವ ಸಾಲದ ಮೊತ್ತವು ಅದರ ಒಟ್ಟು ಸಾಲದ ಶೇಕಡ 40ರಷ್ಟು ಮಾತ್ರ ಎಂದು ಸಿಎಲ್‌ಎಸ್‌ಎ ಬ್ರೋಕರೇಜ್ ಸಂಸ್ಥೆ ಹೇಳಿದೆ. ‘ಖಾಸಗಿ ಬ್ಯಾಂಕ್‌ಗಳು ನೀಡಿರುವ ಸಾಲದ ಮೊತ್ತವು ಸಮೂಹದ ಒಟ್ಟು ಸಾಲದ ಶೇ 10ಕ್ಕಿಂತ ಕಡಿಮೆ ಇದೆ. ಅಲ್ಲದೆ, ಖಾಸಗಿ ಬ್ಯಾಂಕ್‌ಗಳು ಹೆಚ್ಚಿನ ಹಣದ ಹರಿವು ಇರುವುದಕ್ಕೆ ಮಾತ್ರ ಸಾಲ ನೀಡಿವೆ’ ಎಂದು ಸಿಎಲ್‌ಎಸ್‌ಎ ಹೇಳಿದೆ.

ಸಮೂಹದ ಹೊಸ ವಹಿವಾಟುಗಳಿಗೆ ಹಾಗೂ ಸ್ವಾಧೀನ ಪ್ರಕ್ರಿಯೆಗಳಿಗೆ ಸಾಲವು ದೇಶದ ಆಚೆಯಿಂದ ಬಂದಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT