ನವದೆಹಲಿ: ಮುಕ್ತ ವ್ಯಾಪಾರ ಒಪ್ಪಂದಕ್ಕೆ (ಎಫ್ಟಿಎ) ಸಂಬಂಧಿಸಿದ ಮಾತುಕತೆಗಳನ್ನು ಮತ್ತೆ ಆರಂಭಿಸಲು ಭಾರತ ಮತ್ತು ಕೆನಡಾ ಒಪ್ಪಿವೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ತಿಳಿಸಿದ್ದಾರೆ.

ಒಪ್ಪಂದ ಸಾಧ್ಯವಾದರೆ, ಅದು ಎರಡೂ ದೇಶಗಳ ಹೂಡಿಕೆದಾರರಲ್ಲಿ ಹಾಗೂ ಉದ್ಯಮಿಗಳಲ್ಲಿ ವಿಶ್ವಾಸ ಮೂಡಿಸಲಿದೆ ಎಂದು ಅವರು ಹೇಳಿದ್ದಾರೆ.

‘ಮಹತ್ವಾಕಾಂಕ್ಷೆಯ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದ (ಸಿಇಪಿಎ) ಮಾತುಕತೆ ಆರಂಭಿಸಲು ನಾವು ಒಪ್ಪಿದ್ದೇವೆ. ಎರಡೂ ದೇಶಗಳ ನಡುವಿನ ವ್ಯಾಪಾರ ವಹಿವಾಟಿನ ಮೊತ್ತವನ್ನು 2030ರೊಳಗೆ ದುಪ್ಪಟ್ಟುಗೊಳಿಸಲು ಕೂಡ ಒಪ್ಪಿದ್ದೇವೆ’ ಎಂದು ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ಭಾರತ ಮತ್ತು ಕೆನಡಾ ಸಹಜ ಪಾಲುದಾರರು, ಎರಡೂ ದೇಶಗಳು ಪರಸ್ಪರ ಸ್ಪರ್ಧಿಗಳಲ್ಲ ಎಂದಿದ್ದಾರೆ.

ಕೆನಡಾ ದೇಶವು ಭಾರತದ ಜೊತೆಗಿನ ಎಫ್ಟಿಎ ಮಾತುಕತೆಗೆ 2023ರಲ್ಲಿ ವಿರಾಮ ಘೋಷಿಸಿತ್ತು. ಖಾಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಹರದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತದ ಪಾತ್ರ ಇರಬಹುದು ಎಂದು ಕೆನಡಾ ದೇಶದ ಹಿಂದಿನ ಪ್ರಧಾನಿ ಜಸ್ಟಿನ್ ಟ್ರುಡೊ ಅವರು 2023ರಲ್ಲಿ ಆರೋಪಿಸಿದ ನಂತರದಲ್ಲಿ ಎರಡೂ ದೇಶಗಳ ನಡುವಿನ ಸಂಬಂಧವು ಹಳಸಿತ್ತು. ಟ್ರುಡೊ ಆರೋಪವನ್ನು ಭಾರತವು ಅಲ್ಲಗಳೆದಿದೆ.

2023–24ಕ್ಕೆ ಹೋಲಿಸಿದರೆ 2024–25ರಲ್ಲಿ ಭಾರತದಿಂದ ಕೆನಡಾಕ್ಕೆ ಆಗುವ ರಫ್ತಿನ ಪ್ರಮಾಣವು ಶೇ 8ರಷ್ಟು ಹೆಚ್ಚಾಗಿದೆ. ಕೆನಡಾದಲ್ಲಿ ಭಾರತ ಮೂಲದ 29 ಲಕ್ಷ ಮಂದಿ ನೆಲಸಿದ್ದಾರೆ. ಅಲ್ಲದೆ, ಭಾರತದ 4.27 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಅವರನ್ನು ಜೊಹಾನಸ್ಬರ್ಗ್ನಲ್ಲಿ ಜಿ20 ಶೃಂಗಸಭೆಯ ಸಂದರ್ಭದಲ್ಲಿ ಭೇಟಿ ಮಾಡಿದ ನಂತರ ಗೋಯಲ್ ಅವರು ಮಾತುಕತೆ ಪುನರಾರಂಭದ ವಿಷಯ ಪ್ರಕಟಿಸಿದ್ದಾರೆ.

2026ರ ಆರಂಭದಲ್ಲಿ ಭಾರತಕ್ಕೆ ಭೇಟಿ ನೀಡುವಂತೆ ಮೋದಿ ಅವರು ನೀಡಿರುವ ಆಹ್ವಾನವನ್ನು ಕಾರ್ನಿ ಅವರು ಸ್ವೀಕರಿಸಿದ್ದಾರೆ ಎಂದು ಕೆನಡಾ ಪ್ರಧಾನಿಯ ಕಚೇರಿ ಭಾನುವಾರ ಹೊರಡಿಸಿರುವ ಪ್ರಕಟಣೆ ತಿಳಿಸಿದೆ. ಕಾರ್ನಿ ಅವರ ಭಾರತ ಭೇಟಿಯು ಎರಡೂ ದೇಶಗಳ ನಡುವೆ ಎಫ್ಟಿಎ ಮಾತುಕತೆಗೆ ಹೊಸ ಶಕ್ತಿ ನೀಡುವ ನಿರೀಕ್ಷೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.