ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಆರ್ಥಿಕತೆ ವೇಗ ಅಬಾಧಿತ: ವಿಶ್ವ ಬ್ಯಾಂಕ್‌

Published 11 ಜೂನ್ 2024, 16:30 IST
Last Updated 11 ಜೂನ್ 2024, 16:30 IST
ಅಕ್ಷರ ಗಾತ್ರ

ನವದೆಹಲಿ: ‘ಇಡೀ ವಿಶ್ವದಲ್ಲಿಯೇ ಭಾರತದ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿದೆ. 2024–25ನೇ ಆರ್ಥಿಕ ವರ್ಷ ಸೇರಿ ಮುಂದಿನ ಮೂರು ವರ್ಷಗಳಲ್ಲಿ ಜಿಡಿಪಿಯು ಶೇ 6.7ರಷ್ಟು ಪ್ರಗತಿ ದಾಖಲಿಸಿದೆ’ ಎಂದು ವಿಶ್ವ ಬ್ಯಾಂಕ್‌ ಅಂದಾಜಿಸಿದೆ.

2023–24ನೇ ಆರ್ಥಿಕ ವ‌ರ್ಷದಲ್ಲಿ ಭಾರತದ ಜಿಡಿಪಿಯು ಶೇ 8.2ರಷ್ಟು ಪ್ರಗತಿ ಕಂಡಿದೆ. ಜನವರಿಯಲ್ಲಿ ಅಂದಾಜಿಸಿದ್ದಕ್ಕಿಂತಲೂ ಶೇ 1.9ರಷ್ಟು ಹೆಚ್ಚು ಬೆಳವಣಿಗೆ ದಾಖಲಿಸಿದೆ ಎಂದು ಮಂಗಳವಾರ ಬಿಡುಗಡೆಯಾಗಿರುವ ವಿಶ್ವ ಆರ್ಥಿಕತೆಯ ನಿರೀಕ್ಷೆ ಕುರಿತ ವರದಿ ತಿಳಿಸಿದೆ. 

2024ರಲ್ಲಿ ಜಾಗತಿಕ ಆರ್ಥಿಕತೆಯು ಶೇ 2.6ರಷ್ಟು ಪ್ರಗತಿ ಕಾಣಲಿದೆ. 2025–26ನೇ ಆರ್ಥಿಕ ವರ್ಷದ ಅಂತ್ಯಕ್ಕೆ ಶೇ 2.7ರಷ್ಟು ಬೆಳವಣಿಗೆ ದಾಖಲಿಸಲಿದೆ. ಇದು ಕೋವಿಡ್‌ ಸಾಂಕ್ರಾಮಿಕಕ್ಕೂ ಮೊದಲಿನ ದಶಕದಲ್ಲಿ ದಾಖಲಾಗಿದ್ದ ಶೇ 3.1ರಷ್ಟಕ್ಕಿಂತಲೂ ಕಡಿಮೆ ಇದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT