ನವದೆಹಲಿ: ಪ್ರಸ್ತುತ ದೇಶದ ಜಿಡಿಪಿಯಲ್ಲಿ ತಯಾರಿಕಾ ವಲಯದ ಪಾಲು ಅಂದಾಜು ಶೇ 17ರಷ್ಟಿದೆ. ಇದು 2047ರ ವೇಳೆಗೆ ಶೇ 25ಕ್ಕೆ ಹೆಚ್ಚಳವಾಗಲಿದೆ. ಜೊತೆಗೆ ಇದೇ ವೇಳೆಗೆ ಭಾರತವು ‘ಜಾಗತಿಕ ಕೈಗಾರಿಕಾ ಶಕ್ತಿಕೇಂದ್ರ’ವಾಗುವ ಸಾಧ್ಯತೆಯಿದೆ ಎಂದು ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ (ಬಿಸಿಜಿ) ಮತ್ತು ಝಡ್ 47 ಜಂಟಿ ವರದಿ ತಿಳಿಸಿದೆ.

ಮೇಕ್ ಇನ್ ಇಂಡಿಯಾ, ಆತ್ಮನಿರ್ಭರ ಭಾರತ್ ಮತ್ತು ಉತ್ಪಾದನೆ ಆಧಾರಿತ ಉತ್ತೇಜನದಂತಹ (ಪಿಎಲ್ಐ) ಕ್ರಮಗಳು ದೇಶದ ಸಾಮರ್ಥ್ಯವನ್ನು ಕ್ಷಿಪ್ರವಾಗಿ ಹೆಚ್ಚಿಸುತ್ತಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ.

ಎಲೆಕ್ಟ್ರಾನಿಕ್ಸ್, ರಕ್ಷಣೆ, ವಾಹನೋದ್ಯಮ, ಇಂಧನ ಮತ್ತು ಔಷಧ ವಲಯವು ಹೆಚ್ಚಿನ ಕೊಡುಗೆ ನೀಡಲಿದೆ. ತಂತ್ರಜ್ಞಾನ ಅಳವಡಿಕೆ, ನಾವೀನ್ಯ ಹೆಚ್ಚಳ, ಸ್ಪರ್ಧಾತ್ಮಕತೆ, ದಕ್ಷತೆಯು ತಯಾರಿಕಾ ವಲಯದ ಬೆಳವಣಿಗೆಗೆ ಆಧಾರ ಸ್ತಂಭವಾಗಲಿವೆ.

ನೋಯ್ಡಾ–ಚೆನ್ನೈ–ಹೊಸೂರು ಮತ್ತು ಧೋಲೆರಾದಂತಹ ಕಾರಿಡಾರ್ಗಳು ತಯಾರಿಕಾ ವಲಯದ ಹಬ್ ಆಗುತ್ತಿವೆ. ಈ ಕಾರಿಡಾರ್ಗಳು ಪ್ರಯೋಗಾಲಯಗಳು, ಸಾಗಣೆ, ಪೂರೈಕೆದಾರರನ್ನು ಹೊಂದಿವೆ. ಅಲ್ಲದೆ ತಯಾರಿಕಾ ವೆಚ್ಚವನ್ನು ಕಡಿಮೆ ಮಾಡುತ್ತಿದ್ದು, ವಸ್ತುಗಳ ತಯಾರಿಕೆಯನ್ನು ವೇಗಗೊಳಿಸಿವೆ ಎಂದು ತಿಳಿಸಿದೆ.

2022ರಲ್ಲಿ ದೇಶದ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಮಾರುಕಟ್ಟೆಯು ₹2.97 ಲಕ್ಷ ಕೋಟಿ ಮೌಲ್ಯ ಹೊಂದಿತ್ತು. ಇದು 2030ರ ವೇಳೆಗೆ ₹10 ಲಕ್ಷ ಕೋಟಿಯಷ್ಟಾಗುವ ನಿರೀಕ್ಷೆ ಇದೆ ಎಂದು ತಿಳಿಸಿದೆ.