ಕೋಲ್ಕತ್ತ: ದೇಶದ ಎಂಜಿನಿಯರಿಂಗ್ ಸರಕುಗಳ ರಫ್ತು ಮೌಲ್ಯ ಮೇ ತಿಂಗಳಿನಲ್ಲಿ ₹84,557 ಕೋಟಿಯಷ್ಟಾಗಿದೆ ಎಂದು ಎಂಜಿನಿಯರಿಂಗ್ ರಫ್ತು ಉತ್ತೇಜನ ಮಂಡಳಿ (ಇಇಪಿಸಿ) ಶುಕ್ರವಾರ ತಿಳಿಸಿದೆ.

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 0.82ರಷ್ಟು ಇಳಿಕೆಯಾಗಿದೆ. ಜಾಗತಿಕ ರಾಜಕೀಯ ಬಿಕ್ಕಟ್ಟು ರಫ್ತು ಇಳಿಕೆಗೆ ಕಾರಣ ಎಂದು ತಿಳಿಸಿದೆ.

ಆದರೆ, ದೇಶದ ಒಟ್ಟಾರೆ ವ್ಯಾಪಾರ ಸರಕುಗಳ ರಫ್ತಿನಲ್ಲಿ ಎಂಜಿನಿಯರಿಂಗ್ ಸರಕುಗಳ ಪಾಲು ಶೇ 25ರಷ್ಟು ಹೆಚ್ಚಿದೆ. ಅಮೆರಿಕಕ್ಕೆ ರಫ್ತು ಶೇ 4.6ರಷ್ಟು ಹೆಚ್ಚಳವಾಗಿದ್ದು, ₹14,874 ಕೋಟಿಯಾಗಿದೆ. ಚೀನಾಕ್ಕೆ ರಫ್ತು ಶೇ 5ರಷ್ಟು ಇಳಿಕೆಯಾಗಿದ್ದು, ₹1,772 ಕೋಟಿಯಾಗಿದೆ. ಜರ್ಮನಿ, ಬ್ರಿಟನ್, ಜಪಾನ್, ಇಟಲಿಗೆ ರಫ್ತು ಸಕಾರಾತ್ಮಕವಾಗಿದೆ. ಮೆಕ್ಸಿಕೊ, ಟರ್ಕಿ ಮತ್ತು ವಿಯೆಟ್ನಾಂಗೆ ರಫ್ತಿನಲ್ಲಿ ಇಳಿಕೆಯಾಗಿದೆ ಎಂದು ತಿಳಿಸಿದೆ.

2024–25ರ ಆರ್ಥಿಕ ವರ್ಷದ ಏಪ್ರಿಲ್–ಮೇ ತಿಂಗಳ ಅವಧಿಯಲ್ಲಿ ಎಂಜಿನಿಯರಿಂಗ್ ಸರಕುಗಳ ರಫ್ತು ಮೌಲ್ಯ ₹1.58 ಲಕ್ಷ ಕೋಟಿಯಾಗಿತ್ತು. ಈ ಬಾರಿ ₹1.65 ಲಕ್ಷ ಕೋಟಿಯಾಗಿದ್ದು, ಶೇ 4ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.