ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋನಿ ಇಂಡಿಯಾದಲ್ಲಿ ವಿಲೀನವಾಗಲಿದೆ ಜೀ ಎಂಟರ್‌ಟೈನ್ಮೆಂಟ್‌; ಜೀ ಷೇರು ಶೇ 21 ಜಿಗಿತ

Last Updated 22 ಸೆಪ್ಟೆಂಬರ್ 2021, 5:13 IST
ಅಕ್ಷರ ಗಾತ್ರ

ಬೆಂಗಳೂರು: ಸೋನಿ ಪಿಕ್ಚರ್ಸ್‌ ನೆಟ್‌ವರ್ಕ್ಸ್‌ ಇಂಡಿಯಾದೊಂದಿಗೆ (ಎಸ್‌ಪಿಎನ್‌ಐ) ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದ ಸಂಸ್ಥೆ 'ಜೀ ಎಂಟರ್‌ಟೈನ್ಮೆಂಟ್‌ ಎಂಟರ್ಪ್ರೈಸಸ್‌ ಲಿಮಿಟೆಡ್' ವಿಲೀನವಾಗಲಿದೆ. ಮಂಡಳಿಯು ವಿಲೀನ ಪ್ರಕ್ರಿಯೆಗೆ ತಾತ್ವಿಕ ಒಪ್ಪಿಗೆ ನೀಡಿರುವುದಾಗಿ ಜೀ ಎಂಟರ್‌ಟೈನ್ಮೆಂಟ್‌ ಬುಧವಾರ ತಿಳಿಸಿದೆ.

ವಿಲೀನ ಪ್ರಕ್ರಿಯೆ ಸುದ್ದಿ ಹೊರ ಬರುತ್ತಿದ್ದಂತೆ ಜೀ ಎಂಟರ್‌ಟೈನ್ಮೆಂಟ್‌ ಷೇರು ಬೆಲೆ ಶೇ 21.76ರಷ್ಟು (55.65 ರೂಪಾಯಿ) ಏರಿಕೆಯಾಗಿ ₹ 311.35ರಲ್ಲಿ ವಹಿವಾಟು ನಡೆದಿದೆ.

ಟಿವಿ ಪ್ರಸಾರ ಮತ್ತು ಡಿಜಿಟಲ್‌ ಮೀಡಿಯಾದಲ್ಲಿ 'ಜೀ ಟಿವಿ' ಬ್ರ್ಯಾಂಡ್‌ ಮೂಲಕ ಸಂಸ್ಥೆಯು ಗುರುತಿಸಿಕೊಂಡಿದೆ. ಜೀ ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ಬದಲಾವಣೆ ಮಾಡುವಂತೆ ಪ್ರಮುಖ ಹೂಡಿಕೆದಾರರು ಒತ್ತಡ ಹೇರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುನೀತ್‌ ಗೋಯೆಂಕಾ ಅವರನ್ನು ಮಂಡಳಿಯಿಂದ ಹೊರಗಿಡುವಂತೆ ಆಗ್ರಹಿಸಿದ್ದರು.

ಜೀ ಮತ್ತು ಎಸ್‌ಪಿಎನ್‌ಐ ತಮ್ಮ ನೆಟ್‌ವರ್ಕ್‌ಗಳು, ಡಿಜಿಟಲ್‌ ಸ್ವತ್ತುಗಳು, ನಿರ್ಮಾಣ ಕಾರ್ಯಾಚರಣೆಗಳು ಹಾಗೂ ಕಾರ್ಯಕ್ರಮ ಸಂಗ್ರಹಗಳನ್ನು ವಿಲೀನಗೊಳಿಸುವ ಒಪ್ಪಂದಕ್ಕೆ ಬಂದಿವೆ.

ಈ ವಿಲೀನ ಒಪ್ಪಂದದ ಪ್ರಕಾರ, ಜೀ ಸಂಸ್ಥೆಯ ಹೂಡಿಕೆದಾರರು ಶೇ 47.07ರಷ್ಟು ಷೇರುಗಳನ್ನು ಉಳಿಸಿಕೊಳ್ಳಲಿದ್ದಾರೆ ಹಾಗೂ ಉಳಿದ ಷೇರುಗಳು ಸೋನಿ ಇಂಡಿಯಾದ ಹೂಡಿಕೆದಾರರ ಒಡೆತನಕ್ಕೆ ಸಿಗಲಿವೆ. ಸೋನಿ 1.57 ಬಿಲಿಯನ್‌ ಡಾಲರ್‌ (ಸುಮಾರು ₹11,571 ಕೋಟಿ) ಹೂಡಿಕೆ ಮಾಡಲಿದೆ.

ಉಭಯ ಸಂಸ್ಥೆಗಳು ಒಪ್ಪಂದ ಅಂತಿಮಗೊಳಿಸಲು 90 ದಿನಗಳ ಅವಧಿ ಇರುತ್ತದೆ. ವಿಲೀನಗೊಂಡ ಸಂಸ್ಥೆಯು ಭಾರತದ ಷೇರುಪೇಟೆಯಲ್ಲಿ ಸಾರ್ವಜನಿಕ ವಹಿವಾಟಿಗೆ ತೆರೆದುಕೊಳ್ಳಲಿದೆ ಹಾಗೂ ಪುನೀತ್ ಗೋಯೆಂಕಾ ಸಂಸ್ಥೆಯ ನಿರ್ವಾಹಕ ನಿರ್ದೇಶಕ ಮತ್ತು ಸಿಇಒ ಆಗಿ ಉಳಿಯಲಿದ್ದಾರೆ.

ವಿಲೀನ ಪ್ರಕ್ರಿಯೆಯ ಪ್ರಸ್ತಾಪವನ್ನು ಅನುಮತಿಗಾಗಿ ಷೇರುದಾರರ ಮುಂದಿಡಲಾಗುತ್ತದೆ ಎಂದು ಜೀ ಸಂಸ್ಥೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT