ಶನಿವಾರ, ಸೆಪ್ಟೆಂಬರ್ 19, 2020
22 °C

ಇಂಡೋನೇಷ್ಯಾದಲ್ಲಿ ಫೇಸ್‌ಬುಕ್‌, ಟಿಕ್‌ಟಾಕ್‌, ಡಿಸ್ನಿ ಮೇಲೆ ಶೇ 10ರಷ್ಟು ವ್ಯಾಟ್‌

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ಜಕಾರ್ತ: ಫೇಸ್‌ಬುಕ್‌, ಟಿಕ್‌ ಟಾಕ್‌ ಮತ್ತು ಡಿಸ್ನಿ ಡಿಜಿಟಲ್‌ ಸಂಸ್ಥೆಗಳು ಇನ್ನು ಮುಂದೆ ಇಂಡೋನೇಷ್ಯಾದಲ್ಲಿ ತಮ್ಮ ವ್ಯವಹಾರದ ಶೇ.10ರಷ್ಟನ್ನು ಮೌಲ್ಯವರ್ಧಿತ ಸೇವಾ ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಪಾವತಿಸಬೇಕಿದೆ.

ವಾರ್ಷಿಕ ಕನಿಷ್ಠ $41,039 ಮೊತ್ತದ ಡಿಜಿಟಲ್ ವ್ಯವಹಾರ ನಡೆಸುವ ಅಥವಾ ವಾರ್ಷಿಕ 12 ಸಾವಿರ ಬಳಕೆದಾರರನ್ನು ಹೊಂದಿರುವ ಡಿಜಿಟಲ್‌ ಸೇವೆಗಳ ಮಾರಾಟ ಮಾಡುವ ವಿದೇಶಿ ಸಂಸ್ಥೆಗಳಿಗೆ ಇಂಡೋನೇಷ್ಯದಲ್ಲಿ ಶೇ. 10ರಷ್ಟು ವ್ಯಾಟ್‌ ವಿಧಿಸಲಾಗುತ್ತದೆ. ಆ ಪಟ್ಟಿಗೆ ಇದೀಗ ಈ ಮೂರು ವಿದೇಶಿ ಡಿಜಿಟಲ್‌ ಸಂಸ್ಥೆಗಳನ್ನು ಸೇರಿಸಲಾಗಿದೆ.

ಶುಕ್ರವಾರ ಇಂಡೋನೇಷ್ಯಾ ತೆರಿಗೆ ಇಲಾಖೆ ಘೋಷಿಸಿದ ಹೆಚ್ಚುವರಿ ಪಟ್ಟಿಯಲ್ಲಿ, ಫೇಸ್‌ಬುಕ್‌ನ ಮೂರು ಘಟಕಗಳು, ಟಿಕ್‌ ಟಾಕ್‌, ಆಪಲ್ ಡಿಸ್ಟ್ರಿಬ್ಯೂಷನ್ ಇಂಟರ್‌ನ್ಯಾಷನಲ್‌ ಲಿಮಿಟೆಡ್, ದಿ ವಾಲ್ಟ್ ಡಿಸ್ನಿ ಕಂಪನಿ (ಆಗ್ನೇಯ ಏಷ್ಯಾ), ಅಮೆಜಾನ್‌ನ ಆಡಿಬಲ್ ಮತ್ತು ಅಲೆಕ್ಸಾಗಳನ್ನು ಸೇರಿಸಲಾಯಿತು.
ಶೇ. 10ರಷ್ಟು ವ್ಯಾಟ್‌ ಪಾವತಿಸುವ ಡಿಜಿಟಲ್‌ ಸಂಸ್ಥೆಗಳ ಪಟ್ಟಿಯಲ್ಲಿ ಈಗಾಗಲೇ ಅಮೆಜಾನ್, ನೆಟ್‌ಫ್ಲಿಕ್ಸ್, ಸ್ಪಾಟಿಫೈ ಮತ್ತು ಗೂಗಲ್ ಸಂಸ್ಥೆಗಳು ಇದ್ದವು.
ಇಂಡೋನೇಷ್ಯಾ ಸರ್ಕಾರದ ನಿರ್ಧಾರವನ್ನು ಪಾಲಿಸುವುದಾಗಿ ಫೇಸ್‌ಬುಕ್‌ ತಿಳಿಸಿದೆ.

ಕೊರೊನಾ ವೈರಸ್‌ ಸಾಂಕ್ರಾಮಿಕದಿಂದಾಗಿ ಉಂಟಾಗಿರುವ ಆರ್ಥಿಕ ಹಿನ್ನಡೆಯಿಂದಾಗಿ ಇಂಡೋನೇಷ್ಯಾ ಈ ವರ್ಷ ಶೇ. 13ರಷ್ಟು ಆದಾಯ ಕುಸಿತವನ್ನು ಅಂದಾಜು ಮಾಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು