ಇನ್ಫೊಸಿಸ್‌ನ ಮಾಜಿ ಸಿಎಫ್‌ಒ ಆಗಿರುವ ಅವರು, ‘ಐ.ಟಿ ಉದ್ಯಮವು ನಂಬಲರ್ಹವಾದ ಉದ್ಯೋಗ ಸ್ಥಿತ್ಯಂತರಕ್ಕೆ ಒಳಗಾ ಗಿದೆ. ಶೇ 90ಕ್ಕೂ ಅಧಿಕ ಸಿಬ್ಬಂದಿ ಮನೆ ಯಿಂದಲೇ ಕೆಲಸ ನಿರ್ವಹಿಸುತ್ತಿ ದ್ದಾರೆ. ಅವರಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಿ, ಗ್ರಾಹಕರಿಂದ ಅನುಮತಿ ಪಡೆದುಕೊಂಡು, ಸುರಕ್ಷತೆಯನ್ನೂ ಗಮನದಲ್ಲಿ ಇಟ್ಟುಕೊಂಡು ಈ ಸಾಧನೆ ಮಾಡಲಾಗಿದೆ. ಲಾಕ್‌ಡೌನ್ ಹಿಂದಕ್ಕೆ ಪಡೆದ ಬಳಿಕವೂ ಶೇ 25–30ರಷ್ಟು ಸಿಬ್ಬಂದಿ ಪಾಳಿಯ ಆಧಾರದ ಮೇಲೆ ಮನೆಯಿಂದಲೇ ಕೆಲಸ ಮಾಡಬೇಕಾಗಬಹುದು’ ಎಂದು ತಿಳಿಸಿದ್ದಾರೆ.