ನವದೆಹಲಿ: ದತ್ತಾಂಶ ಕೇಂದ್ರಗಳ ಮೇಲಿನ ಹೂಡಿಕೆಗೆ ಭಾರತವು ಅತ್ಯಂತ ಆಕರ್ಷಕವಾಗಿ ಕಾಣುತ್ತಿದೆ ಎಂದು ವರದಿಯೊಂದು ಹೇಳಿದೆ.

ದತ್ತಾಂಶ ಕೇಂದ್ರಗಳ ನಿರ್ಮಾಣಕ್ಕೆ ಈಗ ಮುಂಬೈ ಜಾಗತಿಕ ಮಟ್ಟದಲ್ಲಿ ಎರಡನೆಯ ಅತ್ಯಂತ ಕಡಿಮೆ ಖರ್ಚಿನ ನಗರವಾಗಿ ಪರಿಗಣಿತವಾಗಿದೆ ಎಂದು ‘ಟರ್ನರ್ ಆ್ಯಂಡ್ ಟೌನ್ಸೆಂಡ್ ದತ್ತಾಂಶ ಕೇಂದ್ರ ನಿರ್ಮಾಣ ವೆಚ್ಚ ಸೂಚ್ಯಂಕ’ ಹೇಳಿದೆ.

ಮುಂಬೈನಲ್ಲಿ ದತ್ತಾಂಶ ಕೇಂದ್ರ ನಿರ್ಮಾಣ ಮಾಡುವುದರ ವೆಚ್ಚವು ಪ್ರತಿ ವಾಟ್ಗೆ ಅಂದಾಜು ₹589 ಮಾತ್ರ.

ಕಡಿಮೆ ವೆಚ್ಚದಲ್ಲಿ ದತ್ತಾಂಶ ಕೇಂದ್ರವನ್ನು ಮುಂಬೈನಲ್ಲಿ ನಿರ್ಮಿಸಲು ಸಾಧ್ಯವಿರುವುದು, ಭಾರತಕ್ಕೆ ಈ ವಲಯದಲ್ಲಿ ಹೂಡಿಕೆ ಆಕರ್ಷಿಸಲು ಹೆಚ್ಚಿನ ತಾಕತ್ತನ್ನು ನೀಡಲಿದೆ. ಟೋಕಿಯೊ, ಸಿಂಗಪುರ, ಜುರಿಕ್ನಂತಹ ನಗರಗಳಲ್ಲಿ ದತ್ತಾಂಶ ಕೇಂದ್ರ ನಿರ್ಮಿಸಲು ಬೇಕಿರುವ ಮೊತ್ತವು ಮುಂಬೈಗೆ ಹೋಲಿಸಿದರೆ ದುಪ್ಪಟ್ಟಾಗುತ್ತದೆ ಎಂದು ವರದಿ ಹೇಳಿದೆ.

ಜಗತ್ತಿನಲ್ಲಿ ಸೃಷ್ಟಿಯಾಗುವ ದತ್ತಾಂಶದಲ್ಲಿ ಶೇಕಡ 20ರಷ್ಟು ಪಾಲು ಭಾರತದ್ದು. ಆದರೆ ಜಾಗತಿಕ ದತ್ತಾಂಶ ಕೇಂದ್ರ ಸಾಮರ್ಥ್ಯದಲ್ಲಿ ಭಾರತದ ಪಾಲು ಶೇ 3ರಷ್ಟು ಮಾತ್ರ. ಭಾರತದಲ್ಲಿ ದತ್ತಾಂಶ ಕೇಂದ್ರಗಳಿಗೆ ವಿಸ್ತರಣೆ ಕಾಣಲು ಭಾರಿ ಅವಕಾಶ ಇದೆ ಎಂಬುದನ್ನು ಇದು ಹೇಳುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.