ಎನ್‌ಡಿಟಿವಿ ಪೋಷಕ ಸಂಸ್ಥೆಯ ನಿರ್ದೇಶಕ ಸ್ಥಾನಕ್ಕೆ ರಾಯ್ ದಂಪತಿ ರಾಜೀನಾಮೆ

ನವದೆಹಲಿ: ನ್ಯೂ ಡೆಲ್ಲಿ ಟೆಲಿವಿಷನ್‌ನ (ಎನ್‌ಡಿಟಿವಿಯ) ಪೋಷಕ ಸಂಸ್ಥೆ ಆರ್‌ಆರ್‌ಪಿಆರ್ ಹೋಲ್ಡಿಂಗ್ ಲಿಮಿಟೆಡ್‌ನ ನಿರ್ದೇಶಕ ಸ್ಥಾನಕ್ಕೆ ಸಂಸ್ಥಾಪಕರಾದ ಪ್ರಣಯ್ ರಾಯ್ ಹಾಗೂ ಅವರ ಪತ್ನಿ ರಾಧಿಕಾ ರಾಯ್ ರಾಜೀನಾಮೆ ನೀಡಿದ್ದಾರೆ.
ಅಲ್ಲಿಗೆ ಏಷ್ಯಾದ ನಂಬರ್ 1 ಶ್ರೀಮಂತ ಗೌತಮ್ ಅದಾನಿ ಅವರ ‘ಮಿಷನ್ ಎನ್‌ಡಿಟಿವಿ‘ ಬಹುತೇಕ ಯಶಸ್ವಿಯಾಗಿದೆ.
ನವೆಂಬರ್ 29ರಿಂದಲೇ ಇವರ ರಾಜೀನಾಮೆ ಅನ್ವಯವಾಗಲಿದೆ ಎಂದು ಸೆಬಿಗೆ ಸಲ್ಲಿಸಲಾದ ದಾಖಲೆಯಲ್ಲಿ ಹೇಳಲಾಗಿದೆ.

ಕೆಲ ದಿನಗಳ ಹಿಂದಷ್ಟೇ ಆರ್‌ಆರ್‌ಪಿಆರ್ ಅನ್ನು ಅದಾನಿ ಖರೀದಿ ಮಾಡಿದ್ದರು. ಈ ಸಂಸ್ಥೆಯು ಎನ್‌ಡಿಟಿವಿಯಲ್ಲಿ ಶೇ 29.18 ರಷ್ಟು ಪಾಲು ಹೊಂದಿದೆ.
ಪ್ರಣಯ್ ರಾಯ್ ಅವರು ಎನ್‌ಡಿಟಿವಿಯ ಮುಖ್ಯಸ್ಥರಾಗಿದ್ದು, ರಾಧಿಕಾ ರಾಯ್ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿದ್ದಾರೆ. ಈ ಇಬ್ಬರೂ ಎನ್‌ಡಿಟಿವಿಯ ಈ ಹುದ್ದೆಗಳಲ್ಲಿ ಮುಂದುವರಿಯಲಿದ್ದಾರೆ.
ವೈಯಕ್ತಿಕವಾಗಿ ರಾಯ್ ದಂಪತಿಗಳು ಎನ್‌ಡಿಟಿವಿಯಲ್ಲಿ ಶೇ 32.26 ರಷ್ಟು ಪಾಲು ಹೊಂದಿದ್ದಾರೆ.
ಇವರಿಬ್ಬರ ರಾಜೀನಾಮೆ ಬೆನ್ನಲ್ಲೇ, ಸುದೀಪ್ತಾ ಭಟ್ಟಾಚಾರ್ಯ, ಸಂಜಯ್ ಪುಗಾಲಿಯಾ ಹಾಗೂ ಸೆಂಥಿಲ್ ಸಿನ್ನಯ್ಯ ಚೆಂಗಲ್‌ವರಯನ್ ಅವರನ್ನು ನಿರ್ದೇಶಕರಾಗಿ ನೇಮಕ ಮಾಡಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.