ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಡೆರಹಿತ ಸಂಚಾರಕ್ಕಾಗಿ ಜಿಐಎಸ್‌ ಆಧಾರಿತ ಸಾಫ್ಟ್‌ವೇರ್‌: ಎನ್‌ಎಚ್‌ಎಐ

Published 2 ಸೆಪ್ಟೆಂಬರ್ 2024, 15:43 IST
Last Updated 2 ಸೆಪ್ಟೆಂಬರ್ 2024, 15:43 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಎಚ್‌ಎಐ) ರಾಷ್ಟ್ರೀಯ ಹೆದ್ದಾರಿಗಳಲ್ಲಿ ತಡೆರಹಿತ ಸಂಚಾರಕ್ಕಾಗಿ ಜಿಐಎಸ್ ಆಧಾರಿತ ಸಾಫ್ಟ್‌ವೇರ್‌ನೊಂದಿಗೆ ಸುಮಾರು 100 ಟೋಲ್ ಪ್ಲಾಜಾಗಳಲ್ಲಿ ನಿಗಾ ವ್ಯವಸ್ಥೆ ಜಾರಿಗೆ ತರಲಿದೆ ಎಂದು ಅಧಿಕೃತ ಹೇಳಿಕೆ ಸೋಮವಾರ ತಿಳಿಸಿದೆ.

ಟೋಲ್ ಕೇಂದ್ರಗಳಲ್ಲಿ ವಾಹನಗಳ ಸಾಲು ನಿಗದಿತ ಮಿತಿಗಿಂತ ಹೆಚ್ಚಿದ್ದಾಗ ನೇರ ನಿಗಾ ವ್ಯವಸ್ಥೆಯು ದಟ್ಟಣೆ ಮತ್ತು ಲೇನ್ ಮಾಹಿತಿಯನ್ನು ನೀಡುತ್ತದೆ. ಈ ಸೇವೆಯನ್ನು ಹಂತ ಹಂತವಾಗಿ ಹೆಚ್ಚಿನ ಟೋಲ್ ಕೇಂದ್ರಗಳಿಗೆ ವಿಸ್ತರಿಸಲಾಗುವುದು ಎಂದು ಹೇಳಿದೆ.

ಟೋಲ್ ಕೇಂದ್ರದ ಹೆಸರು ಮತ್ತು ಸ್ಥಳವನ್ನು ಒದಗಿಸುವುದರ ಜೊತೆಗೆ, ಟೋಲ್ ಕೇಂದ್ರದಲ್ಲಿಎಷ್ಟು ಉದ್ದದ ಸಾಲು ಇದೆ,  ಕಾಯುವ ಸಮಯ ಮತ್ತು ವಾಹನದ ವೇಗಕ್ಕೆ ಸಂಬಂಧಿಸಿದ ವಿವರಗಳನ್ನು ಸಾಫ್ಟ್‌ವೇರ್‌ ನೀಡುತ್ತದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT