ಮುಂಬೈ: ರುಪೇ ಕ್ರೆಡಿಟ್ ಕಾರ್ಡ್‌ಅನ್ನು ಏಕೀಕೃತ ಪಾವತಿ ವ್ಯವಸ್ಥೆಯಲ್ಲಿ (ಯುಪಿಐ) ಬಳಕೆ ಮಾಡಲು ಎಚ್‌ಡಿಎಫ್‌ಸಿ ಬ್ಯಾಂಕ್ ಅವಕಾಶ ಕಲ್ಪಿಸಿದೆ. ಈ ಅವಕಾಶ ನೀಡಿರುವ ಮೊದಲ ಖಾಸಗಿ ಬ್ಯಾಂಕ್ ಇದು.
ಯುಪಿಐ ಐಡಿ ಜೊತೆ ಉಳಿತಾಯ ಖಾತೆಯನ್ನು ಮಾತ್ರ ಜೋಡಿಸಲು ಅವಕಾಶ ಇತ್ತು. ಉಳಿತಾಯ ಖಾತೆಯಿಂದ ಹಣ ಪಾವತಿ ಮಾಡಲಾಗುತ್ತಿತ್ತು. ಆದರೆ, ಇನ್ನು ಮುಂದೆ ಎಚ್‌ಡಿಎಫ್‌ಸಿ ಬ್ಯಾಂಕ್‌ನ ರುಪೇ ಕ್ರೆಡಿಟ್ ಕಾರ್ಡ್‌ಗಳನ್ನು ಯುಪಿಐ ಐಡಿ ಜೊತೆ ಜೋಡಿಸಬಹುದು. ಯುಪಿಐ ಮೂಲಕ ಕ್ರೆಡಿಟ್ ಕಾರ್ಡ್‌ಗಳಿಂದ ಪಾವತಿ ಮಾಡಬಹುದು.
ಬ್ಯಾಂಕ್‌ನ ಈ ನಡೆಯು ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳನ್ನು ನೀಡಲಿದೆ ಎಂದು ಪಾವತಿಗಳ ಮುಖ್ಯಸ್ಥ ಪರಾಗ್ ರಾವ್ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.