ಬುಧವಾರ, ಜುಲೈ 28, 2021
23 °C

ಉತ್ಪಾದನೆ ಕಡಿತ ಒಪ್ಪಂದ ಜುಲೈ ಅಂತ್ಯದವರೆಗೂ ಮುಂದುವರಿಕೆ: ಕಚ್ಚಾ ತೈಲ ದರ ಏರಿಕೆ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಸಿಂಗಪುರ: ಕಚ್ಚಾತೈಲ ಉತ್ಪಾದಿಸುವ ಪ್ರಮುಖ ದೇಶಗಳು ಉತ್ಪಾದನೆ ಕಡಿತ ಒಪ್ಪಂದವನ್ನು ಒಂದು ತಿಂಗಳವರೆಗೆ ವಿಸ್ತರಿಸಿವೆ. ಇದರಿಂದಾಗಿ ಸೋಮವಾರ ತೈಲ ದರದಲ್ಲಿ ಶೇ 2.1ರವರೆಗೂ ಏರಿಕೆ ಕಂಡುಬಂದಿತು.

ಬ್ರೆಂಟ್‌ ತೈಲ ದರ ಶೇ 2.1ರಷ್ಟು ಹೆಚ್ಚಾಗಿ ಪ್ರತಿ ಬ್ಯಾರಲ್‌ಗೆ 43.19 ಡಾಲರ್‌ಗಳಿಗೆ ತಲುಪಿತು. ಅಮೆರಿಕದ ವೆಸ್ಟ್ ಟೆಕ್ಸಾಸ್‌ ಇಂಟರ್‌ಮಿಡಿಯೇಟ್‌ ದರ್ಜೆಯ (ಡಬ್ಲ್ಯುಟಿಐ) ಕಚ್ಚಾತೈಲ ದರ ಶೇ 1.6ರಷ್ಟು ಹೆಚ್ಚಾಗಿ ಬ್ಯಾರಲ್‌ಗೆ 40.17 ಡಾಲರ್‌ಗಳಿಗೆ ಏರಿಕೆಯಾಗಿದೆ. ಮಾರ್ಚ್‌ 6ರ ನಂತರದ ಗರಿಷ್ಠ ದರ ಇದಾಗಿದೆ.

ಒಪೆಕ್‌, ರಷ್ಯಾ ಮತ್ತು ಇತರೆ ದೇಶಗಳನ್ನು ಒಳಗೊಂಡ ಒಪೆಕ್‌ ಪ್ಲಸ್, ಮೇ–ಜೂನ್‌ ಅವಧಿಗೆ‌  ಪ್ರತಿ ದಿನಕ್ಕೆ 97 ಲಕ್ಷ ಬ್ಯಾರಲ್‌ ಉತ್ಪಾದನೆ ತಗ್ಗಿಸುವ ಕುರಿತು ಏಪ್ರಿಲ್‌ನಲ್ಲಿ ನಿರ್ಧಾರ ಕೈಗೊಂಡಿದ್ದವು. ಆ ದಿನದಿಂದ ಇದುವರೆಗೆ ಬ್ರೆಂಟ್ ತೈಲ ದರವು ಎರಡು ಪಟ್ಟು ಹೆಚ್ಚಾಗಿದೆ.

ಶನಿವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ನಡೆದ ಸಭೆಯಲ್ಲಿ ಜುಲೈ ಅಂತ್ಯದವರೆಗೂ ಉತ್ಪಾದನೆ ಕಡಿತವನ್ನು ಮುಂದುವರಿಸಲು ನಿರ್ಧರಿಸಲಾಗಿದೆ. ಇದರಿಂದಾಗಿ ಸೌದಿ ಅರೇಬಿಯಾವು ಜುಲೈನಲ್ಲಿ ರಫ್ತು ಮಾಡುವ ಕಚ್ಚಾ ತೈಲದ ದರದಲ್ಲಿ ಏರಿಕೆ ಮಾಡಿದೆ.

ತೈಲ ದರ ಇಳಿಮುಖವಾಗಿರುವುದರಿಂದ ಚೀನಾದ ಆಮದು ಪ್ರಮಾಣವು ಸಾರ್ವಕಾಲಿಕ ಗರಿಷ್ಠ ಮಟ್ಟವಾದ ದಿನಕ್ಕೆ 1.13 ಕೋಟಿ ಬ್ಯಾರಲ್‌ಗೆ ತಲುಪಿದೆ.

ದರ ಏರಿಕೆ: ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ  ಜೂನ್‌ನಲ್ಲಿ ಮಾರಾಟವಾಗಲಿರುವ ಕಚ್ಚಾತೈಲ ದರ ಪ್ರತಿ ಬ್ಯಾರಲ್‌ಗೆ ₹ 29ರಂತೆ ಹೆಚ್ಚಾಗಿದ್ದು ₹ 3,019ಕ್ಕೆ ಏರಿಕೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು