ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒನ್‌ಪ್ಲಸ್‌ 7 ಮಾರುಕಟ್ಟೆಗೆ

ಇಂದಿನಿಂದಲೇ ಅಮೆಜಾನ್‌ನಲ್ಲಿ ಖರೀದಿಗೆ ಲಭ್ಯ
Last Updated 14 ಮೇ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ಚೀನಾದ ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆ ಒನ್‌ಪ್ಲಸ್,ಹೊಸ ವೈಶಿಷ್ಟ್ಯತೆಗಳನ್ನು ಒಳಗೊಂಡ ಒನ್‌ಪ್ಲಸ್ 7 ಪ್ರೊ ಮತ್ತು ಒನ್ ಪ್ಲಸ್ 7 ಹೆಸರಿನ ಎರಡು ಹೊಸ ಪ್ರೀಮಿಯಂ ಮೊಬೈಲ್‌ಗಳನ್ನು ಮಂಗಳವಾರ ರಾತ್ರಿ ಇಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಮಾರುಕಟ್ಟೆಗೆ ಪರಿಚಯಿಸಿತು.

ಒನ್ ಪ್ಲಸ್ 7 ಪ್ರೊ ಸ್ಮಾರ್ಟ್ ಪೋನ್ ಮೂರು ಆಕರ್ಷಕ ಬಣ್ಣಗಳಲ್ಲಿ ಲಭ್ಯ ಇರಲಿವೆ.16 ಪಿಕ್ಸಲ್ ಗುಣಮಟ್ಟದ ಪಾಪ್ ಅಪ್ ಕ್ಯಾಮೆರಾವನ್ನು ಸೆಲ್ಫಿ ತೆಗೆಯುವುದಕ್ಕಾಗಿ ವಿಶೇಷವಾಗಿ ರೂಪಿಸಲಾಗಿದೆ.ಹಿಂಬದಿ ಮೂರು ಕ್ಯಾಮೆರಾಗಳಿದ್ದು, ಇವುಗಳಿಗೆ 7 ಪಿ ಲೆನ್ಸ್ ಒದಗಿಸಲಾಗಿದೆ.ಮಧ್ಯದಲ್ಲಿ ಇರುವ ಕ್ಯಾಮೆರಾ 48 ಮೆಗಾ ಪಿಕ್ಸೆಲ್,ಕೊನೆಯಲ್ಲಿ ಇರುವ ಕ್ಯಾಮೆರಾ 8 ಮೆಗಾ ಪಿಕ್ಸೆಲ್, ಮೇಲಿನ ಕ್ಯಾಮೆರಾ16 ಮೆಗಾಪಿಕ್ಸೆಲ್ ಇದೆ.

ಫ್ಲ್ಯೂಯಿಡ್ ಅಮೊಎಲ್‌ಇಡಿ ತಂತ್ರಜ್ಞಾನ ಹೊಂದಿರುವ 6.7 ಇಂಚು ಪರದೆ ಹೊಂದಿದೆ. 7 ಎನ್ಎಂ ಚಿಪ್ ಸೆಟ್ ಇರುವ ಕ್ವಾಲ್ಕಮ್ ಪ್ರೊಸೆಸರ್, ರ್‍ಯಾಮ್‌12 ಜಿಬಿಗೆ ಹೆಚ್ಚಿಸಲಾಗಿದೆ. 4000 ಎಂಎಎಚ್ ಬ್ಯಾಟರಿ. 20 ನಿಮಿಷಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಆಗಲಿದೆ.ಗೇಮಿಂಗ್ ಅನುಭವ ವಿಶಿಷ್ಟವಾಗಿಸಲು ಡೋಲ್ಬಿ ಅಟಾಮ್ಸ್ ಗುಣಮಟ್ಟದ ಎರಡು ಸ್ಪೀಕರ್‌ಗಳಿವೆ.7 ಪ್ರೊ ಯುಎಫ್ ಎಸ್ 3.0 ತಂತ್ರಜ್ಞಾನ ಹೊಂದಿದ ವಿಶ್ವದ ಮೊದಲ ಸ್ಮಾರ್ಟ್ ಫೋನ್ ಇದಾಗಿದೆ. ಇದೇ ಮೊದಲ ಬಾರಿಗೆ ಈ ಫೋನ್‌ಗಳಲ್ಲಿ ನೆಟ್ ಪ್ಲಿಕ್ಸ್ ವಿಡಿಯೊಗಳನ್ನು ವೀಕ್ಷಿಸುವ ಸೌಲಭ್ಯ ಒದಗಿಸಲಾಗಿದೆ.

ಒನ್‌ಪ್ಲಸ್‌ 7 ಪ್ರೊ ಬೆಲೆ ಮೂರು ಬೆಲೆಗಳಲ್ಲಿ ಲಭ್ಯ ಇರಲಿದೆ. ಆರಂಭಿಕ ಬೆಲೆ ₹ 48,999 ಇದೆ. 12 ಜಿಬಿ ರ್‍ಯಾಮ್‌ ಸಾಮರ್ಥ್ಯದ ಬೆಲೆ ₹ 57,999 ಇದೆ.

ಒನ್ ಪ್ಲಸ್ 7 6 ಜಿಬಿ ರ್‍ಯಾಮ್‌ ಸಾಮರ್ಥ್ಯದ ಬೆಲೆ ₹ 32,999 ಮತ್ತು 8 ಜಿಬಿ ರ್‍ಯಾಮ್‌ ಸಾಮರ್ಥ್ಯದ ಬೆಲೆ ₹ 39,999 ಇದೆ. ಬುಧವಾರದಿಂದಲೆ ಅಮೆಜಾನ್ ನಲ್ಲಿ ಖರೀದಿಗೆ ಲಭ್ಯ ಇರಲಿದೆ.

ತುಮಕೂರು ರಸ್ತೆಯಲ್ಲಿನ ಬೆಂಗಳೂರು ಅಂತರರಾಷ್ಡ್ರೀಯ ಕೇಂದ್ರದಲ್ಲಿ ಆಯೋಜಿಸಿದ್ದ ಬಿಡುಗಡೆ ಸಮಾರಂಭದಲ್ಲಿ ಒನ್‌ಪ್ಲಸ್‌ನ ‌ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT