ಸೋಮವಾರ, ಜೂಲೈ 6, 2020
26 °C

ಕಚ್ಚಾತೈಲ ಉತ್ಪಾದನೆ ಕಡಿತ ಒಪ್ಪಂದ ಜುಲೈವರೆಗೆ ವಿಸ್ತರಣೆ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ದುಬೈ/ಲಂಡನ್: ಮಾರುಕಟ್ಟೆಯಲ್ಲಿ ಸಮತೋಲನ ಕಾಯ್ದುಕೊಳ್ಳುವ ಉದ್ದೇಶದಿಂದ ಕಚ್ಚಾತೈಲ ಉತ್ಪಾದನೆ ಕಡಿತದ  ಅವಧಿಯನ್ನು ಜುಲೈ ಅಂತ್ಯದವರೆಗೂ ವಿಸ್ತರಿಸಲು ಕಚ್ಚಾ ತೈಲ ರಫ್ತು ದೇಶಗಳ ಸಂಘಟನೆ (ಒಪೆಕ್‌) ಮತ್ತು ಇತರ ದೇಶಗಳು ಒಪ್ಪಿಗೆ ಸೂಚಿಸಿವೆ.

ಮೇ 1ರಿಂದ ಜೂನ್‌ ಅಂತ್ಯದವರೆಗೆ 97 ಲಕ್ಷ ಬ್ಯಾರಲ್‌ ಉತ್ಪಾದನೆ ತಗ್ಗಿಸುವ ಕುರಿತು ಏಪ್ರಿಲ್‌ನಲ್ಲಿ ಒಪ್ಪಂದಕ್ಕೆ ಬರಲಾಗಿತ್ತು. ಆ ಬಳಿಕ ಜುಲೈ–ಡಿಸೆಂಬರ್‌ ಅವಧಿಗೆ ದಿನದ ಉತ್ಪಾದನೆ ಕಡಿತವನ್ನು 77 ಲಕ್ಷ ಬ್ಯಾರಲ್‌ಗೆ ತಗ್ಗಿಸಲು ನಿರ್ಧರಿಸಲಾಗಿತ್ತು.

ಆದರೆ, ಲಾಕ್‌ಡೌನ್‌ ಜಾರಿಯಲ್ಲಿ ಇರುವುದರಿಂದ ಬೇಡಿಕೆ ಇಳಿಮುಖವಾಗಿದ್ದು, ದರದಲ್ಲಿಯೂ ಚೇತರಿಕೆ ಕಂಡುಬಂದಿಲ್ಲ. ಹೀಗಾಗಿ ಜೂನ್‌ಗೆ ಅಂತ್ಯವಾಗಬೇಕಿದ್ದ ಒಪ್ಪಂದವನ್ನು ಜುಲೈವರೆಗೂ ವಿಸ್ತರಿಸಲು ಶನಿವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.

ವಿಡಿಯೊ ಕಾನ್ಪರೆನ್ಸ್‌ ಮೂಲಕ ನಡೆದ ಸಭೆಯಲ್ಲಿ ಸೌದಿ ಅರೇಬಿಯಾ ನೇತೃತ್ವದ ಒಪೆಕ್‌ನ ಸದಸ್ಯ ದೇಶಗಳು, ರಷ್ಯಾ ಮತ್ತು ಇತರೆ ದೇಶಗಳು ಭಾಗವಹಿಸಿದ್ದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು