ಮಂಗಳವಾರ, ಮೇ 17, 2022
29 °C

ರಾಜ್ಯಗಳಿಗೆ ₹ 2.06 ಲಕ್ಷ ಕೋಟಿ ಜಿಎಸ್‌ಟಿ ಪರಿಹಾರ ಬಾಕಿ: ಸಚಿವ ಅನುರಾಗ್‌ ಠಾಕೂರ್

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ‘2020ರ ಏಪ್ರಿಲ್‌–ನವೆಂಬರ್ ಅವಧಿಗೆ ರಾಜ್ಯಗಳಿಗೆ ನೀಡಬೇಕಿರುವ ಜಿಎಸ್‌ಟಿ ಪರಿಹಾರದ ಬಾಕಿ ಮೊತ್ತವು ₹ 2.06 ಲಕ್ಷ ಕೋಟಿಗಳಷ್ಟಿದೆ’ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್‌ ಸಿಂಗ್‌ ಠಾಕೂರ್‌ ಅವರು ಸೋಮವಾರ ಲೋಕಸಭೆಗೆ ಮಾಹಿತಿ ನೀಡಿದರು.

‘ಜಿಎಸ್‌ಟಿ ವ್ಯವಸ್ಥೆಯಿಂದ ರಾಜ್ಯಗಳಿಗೆ ಆಗಿರುವ ಕೊರತೆ ನೀಗಿಸಲು ಕೆಂದ್ರ ಸರ್ಕಾರವು ವಿಶೇಷ ಸಾಲ ಯೋಜನೆಯಡಿ ಇಲ್ಲಿಯವರೆಗೆ ₹ 84 ಸಾವಿರ ಕೋಟಿ ಬಿಡುಗಡೆ ಮಾಡಲಾಗಿದೆ. 2020ರ ಏಪ್ರಿಲ್‌–ಮೇ ಅವಧಿಗೆ ಸಂಪೂರ್ಣ ಪರಿಹಾರವನ್ನು ನೀಡಲು ಜಿಎಸ್‌ಟಿ ಪರಿಹಾರ ನಿಧಿ ಸಮರ್ಪಕವಾಗಿಲ್ಲದ ಕಾರಣ, ಈ ಅವಧಿಗೆ ಭಾಗಶಃ ದ್ವೈಮಾಸಿಕ ಪರಿಹಾರವನ್ನು ಪೂರೈಸಲು ₹ 40,000 ಕೋಟಿ ಮೊತ್ತವನ್ನು ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಬಿಡುಗಡೆ ಮಾಡಲಾಗಿದೆ.

‘ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಎಸ್‌ಟಿ ಪರಿಹಾರ ನಿಧಿಯಲ್ಲಿ ಸಾಕಷ್ಟು ಹಣ ಇಲ್ಲದೇ ಇರುವುದರಿಂದ ಏಪ್ರಿಲ್‌–ನವೆಂಬರ್‌ ಅವಧಿಗೆ ಪರಿಹಾರದ ಮೊತ್ತ ಬಾಕಿ ಉಳಿದಿದೆ’ ಎಂದು ಅವರು ವಿವರಿಸಿದ್ದಾರೆ.

‘2017ರ ಜುಲೈನಿಂದ ಫೆಬ್ರುವರಿ 8ರವರೆಗೆ ಎಲ್ಲಾ ರಾಜ್ಯಗಳಿಗೆ ಬಿಡುಗಡೆ ಮಾಡಿರುವ ಜಿಎಸ್‌ಟಿ ಪರಿಹಾರ ಮೊತ್ತವು ₹ 3.37 ಲಕ್ಷ ಕೋಟಿಗಳಷ್ಟಾಗಿದೆ’ ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು