ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಆರ್ಥಿಕತೆ ಚೇತರಿಕೆಗೆ 2–3 ವರ್ಷ ಬೇಕು: ಸುನಿಲ್‌ ಕಾಂತ್‌ ಮುಂಜಲ್‌

Last Updated 11 ಜುಲೈ 2020, 11:23 IST
ಅಕ್ಷರ ಗಾತ್ರ

ಮುಂಬೈ: ‘ದೇಶದ ಆರ್ಥಿಕತೆಯು ಚೇತರಿಸಿಕೊಳ್ಳಲು ಎರಡರಿಂದ ಮೂರು ವರ್ಷ ಹಿಡಿಯಲಿದೆ’ ಎಂದು ಹೀರೊ ಎಂಟ್‌ಪ್ರೈಸಸ್‌ನ ಅಧ್ಯಕ್ಷ ಸುನಿಲ್‌ ಕಾಂತ್‌ ಮುಂಜಲ್‌ ಅಭಿಪ್ರಾಯಪಟ್ಟಿದ್ದಾರೆ.

‘ಕೆಲವು ವಲಯಗಳು ತ್ವರಿತ ಚೇತರಿಕೆ ಕಂಡರೂ ಒಟ್ಟಾರೆ ಆರ್ಥಿಕತೆಯ ಚೇತರಿಕೆಗೆ ಎರಡರಿಂದ ಮೂರು ವರ್ಷಗಳು ಬೇಕಾಗಲಿವೆ. ಇದಕ್ಕಾಗಿ ಇನ್ನೂ ಹೆಚ್ಚಿನ ವಿತ್ತೀಯ ಬೆಂಬಲದ ಅಗತ್ಯವಿದೆ’ ಎಂದೂ ಅವರು ಹೇಳಿದ್ದಾರೆ.

ಎಸ್‌ಬಿಐ ಆಯೋಜಿಸಿದ್ದ ವರ್ಚುವಲ್‌ ಬ್ಯಾಂಕಿಂಗ್‌ ಆ್ಯಂಡ್‌ ಎಕಾನಮಿ ಕಾನ್‌ಕ್ಲೇವ್‌ನಲ್ಲಿ ‘ಆರ್ಥಿಕತೆ ಮತ್ತು ವ್ಯಾಪಾರದ ಮೇಲೆ ಕೋವಿಡ್‌ ಪರಿಣಾಮ’ ವಿಷಯದ ಕುರಿತು ಮಾತನಾಡಿದರು.

‘ಒಟ್ಟಾರೆಯಾಗಿ ವ್ಯವಸ್ಥೆ ಸರಿಹೋಗಲು ಕೆಲವು ಸಾಂಸ್ಥಿಕವಾದ ಮತ್ತು ದೀರ್ಘಾವಧಿಯ ಶಾಶ್ವತ ‍ಪರಿಹಾರ ಕ್ರಮಗಳ ಅಗತ್ಯವಿದೆ. ಕೇಂದ್ರ ಸರ್ಕಾರವು ಕೇವಲ ಆರ್ಥಿಕ ನೆರವು ನೀಡುವುದಷ್ಟೇ ಅಲ್ಲದೆ, ಕೆಲವು ವ್ಯಕ್ತಿಗತವಾದ ಸಂಘ–ಸಂಸ್ಥೆಗಳು ಮತ್ತು ವಲಯವಾರು ವಿತ್ತೀಯ ಬೆಂಬಲ ನೀಡಲು ಸಿದ್ಧವಾಗಬೇಕು.

‘ಕೆಲವು ಕಂಪನಿಗಳು ಬಾಗಿಲು ಮುಚ್ಚಿವೆ. ಇವುಗಳು ಚೇತರಿಸಿಕೊಳ್ಳುವ ಸಾಧ್ಯತೆ ಕಡಿಮೆ. ಇವುಗಳಲ್ಲಿ ಬಹುತೇಕ ಕಂಪನಿಗಳು ಗ್ರಾತ್ರದಲ್ಲಿ ಸಣ್ಣ ಮತ್ತು ಮಧ್ಯಮ ಪ್ರಮಾಣದ್ದಾಗಿವೆ. ಇದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ’ ಎಂದು ಅವರು ಹೇಳಿದ್ದಾರೆ.

ಬೇಡಿಕೆ ಕುಸಿತ ಮತ್ತು ಉದ್ಯೋಗ ನಷ್ಟ ಆಗುತ್ತಿದ್ದು, ಉದ್ಯೋಗ ನಷ್ಟ ಪ್ರಮಾಣ ಶೇ 20ರವರೆಗೂ ತಲುಪಬಹುದು ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT