ಭಾನುವಾರ, ಜೂನ್ 13, 2021
25 °C

ಪೇಟಿಎಂ ನಷ್ಟ ₹ 1,704 ಕೋಟಿಗೆ ಇಳಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಡಿಜಿಟಲ್ ಪಾವತಿ ಸೇರಿದಂತೆ ವಿವಿಧ ಹಣಕಾಸು ಸೇವೆಗಳನ್ನು ಒದಗಿಸುವ ಪೇಟಿಎಂ ಕಂಪನಿಯ ಒಟ್ಟಾರೆ ನಷ್ಟವು 2019–20ನೇ ಹಣಕಾಸು ವರ್ಷಕ್ಕೆ ಹೋಲಿಸಿದರೆ 2020–21ರಲ್ಲಿ ಇಳಿಕೆ ಕಂಡಿದೆ.

ಕಂಪನಿಯ ವಾರ್ಷಿಕ ವರದಿಯ ಪ್ರಕಾರ, 2020–21ನೇ ಹಣಕಾಸು ವರ್ಷದಲ್ಲಿ ಪೇಟಿಎಂನ ಒಟ್ಟಾರೆ ನಷ್ಟವು ₹ 1,704 ಕೋಟಿಗಳಷ್ಟಾಗಿದೆ. 2019–20ರಲ್ಲಿ ನಷ್ಟವು ₹ 2,943 ಕೋಟಿಗಳಷ್ಟಿತ್ತು.

ಕಂಪನಿಯ ಒಟ್ಟಾರೆ ವರಮಾನವು ಶೇ 10ರಷ್ಟು ಇಳಿಕೆ ಆಗಿದ್ದು ₹ 3,186 ಕೋಟಿಗಳಿಗೆ ತಲುಪಿದೆ. 2019–20ನೇ ಹಣಕಾಸು ವರ್ಷದಲ್ಲಿ ₹ 3,540 ಕೋಟಿಗಳಷ್ಟು ವರಮಾನ ಹೊಂದಿತ್ತು. ಕೋವಿಡ್‌ ಸಾಂಕ್ರಾಮಿಕದಿಂದಾಗಿ ಹಣಕಾಸು ವರ್ಷದ ಮೊದಲಾರ್ಧದಲ್ಲಿ ನಮ್ಮ ವ್ಯಾಪಾರಿ ಪಾಲುದಾರರ ವ್ಯವಹಾರಕ್ಕೆ ಹೆಚ್ಚಿನ ಅಡ್ಡಿ ಉಂಟಾಗಿತ್ತು. ಆದರೆ, ದ್ವಿತೀಯಾರ್ಧದಲ್ಲಿ ಉತ್ತಮ ಚೇತರಿಕೆ ಕಂಡುಬಂದಿದೆ. ಇದರಿಂದಾಗಿ ನಮ್ಮ ಆದಾಯದ ಮೇಲೆ ಕಡಿಮೆ ಪರಿಣಾಮ ಉಂಟಾಗಿದೆ ಎಂದು ಪೇಟಿಎಂ ವಕ್ತಾರರೊಬ್ಬರು ತಿಳಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು