ಬುಧವಾರ, ಮೇ 25, 2022
30 °C

16 ದಿನಗಳಲ್ಲಿ 14ನೇ ಬಾರಿ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ: ಎಲ್ಲೆಲ್ಲಿ ಎಷ್ಟು?

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಬುಧವಾರವೂ ದೇಶದಾದ್ಯಂತ ಇಂಧನ ದರದಲ್ಲಿ ಹೆಚ್ಚಳ ಮಾಡಿವೆ. ಈ ಮೂಲಕ ಕಳೆದ 16 ದಿನಗಳಲ್ಲಿ 14ನೇ ಬಾರಿ ಪೆಟ್ರೋಲ್‌, ಡೀಸೆಲ್‌ ದರ ಮತ್ತೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ಲೀಟರಿಗೆ 91 ಪೈಸೆಯಷ್ಟು ಹೆಚ್ಚಾಗಿದ್ದು ₹111.16ಕ್ಕೆ ಏರಿಕೆ ಆಗಿದೆ. ಡೀಸೆಲ್‌ ದರ ಲೀಟರಿಗೆ 85 ಪೈಸೆ ಹೆಚ್ಚಳವಾಗಿದ್ದು ₹94.86ಕ್ಕೆ ತಲುಪಿದೆ. ಕಳೆದ 10 ದಿನಗಳಲ್ಲಿ ಡೀಸೆಲ್ ದರ ₹ 89.02 ರಿಂದ ₹ 94.86 ಕ್ಕೆ ಏರಿಕೆಯಾಗಿದೆ.

ದೆಹಲಿಯಲ್ಲಿಂದು ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ 80 ಪೈಸೆಗಳಷ್ಟು ಏರಿಕೆಯಾಗಿದೆ. ನಿನ್ನೆ 104.61 ರಷ್ಟಿದ್ದ ಲೀಟರ್ ಪೆಟ್ರೋಲ್ ಬೆಲೆ ₹ 105.41 ಆಗಿದ್ದರೆ, ಲೀಟರ್ ಡೀಸೆಲ್ ಬೆಲೆ 96.677ಕ್ಕೆ ಮಾರಾಟವಾಗುತ್ತಿದೆ.

ಮುಂಬೈನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ಗೆ 84 ಪೈಸೆ ಹೆಚ್ಚಳವಾಗಿ ₹ 120.51 ಮತ್ತು ಡೀಸೆಲ್‌ಗೆ 85 ಪೈಸೆ ಏರಿಕೆಯಾಗಿ ₹ 104.77ಕ್ಕೆ ತಲುಪಿದೆ.

ಸ್ಥಳೀಯ ಮಾರಾಟ ತೆರಿಗೆ ಮತ್ತು ಸಾಗಣೆ ವೆಚ್ಚಕ್ಕೆ ಅನುಗುಣವಾಗಿ ಮಾರಾಟ ದರವು ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸ ಆಗುತ್ತದೆ.

ಐದು ರಾಜ್ಯಗಳ ಚುನಾವಣೆ ಕೊನೆಗೊಂಡ ಬಳಿಕ ಮಾರ್ಚ್ 22 ರಂದು ನಡೆದ ದರ ಪರಿಷ್ಕರಣೆಯಲ್ಲಿ ನಾಲ್ಕೂವರೆ ತಿಂಗಳ ಸುದೀರ್ಘ ವಿರಾಮ ಅಂತ್ಯಗೊಂಡ ನಂತರ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಸತತ 14 ನೇ ಬಾರಿ ಹೆಚ್ಚಳವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು