ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಬೆಲೆ ಏರಿಕೆ: ಆಂಧ್ರ, ತೆಲಂಗಾಣ, ಲೇಹ್‌ನಲ್ಲಿ ₹100 ದಾಟಿದ ಪೆಟ್ರೋಲ್ ದರ

Last Updated 4 ಜೂನ್ 2021, 8:27 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಶುಕ್ರವಾರ ಪುನಃ ತೈಲ ಬೆಲೆಯಲ್ಲಿ ಏರಿಕೆಯಾಗಿದ್ದು, ಪರಿಷ್ಕೃತದ ದರದ ಅನ್ವಯ ಲೇಹ್‌ನಲ್ಲೂ ಪ್ರತಿ ಲೀಟರ್‌ ಪೆಟ್ರೋಲ್ ಬೆಲೆ ₹100 ದಾಟಿದೆ.

ಈ ಮೊದಲು ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಲೀಟರ್‌ ಪೆಟ್ರೊಲ್ ಬೆಲೆ ₹100ರ ಗಡಿ ದಾಟಿತ್ತು. ಈ ಸಾಲಿಗೆ ಇದೀಗ ಲೇಹ್‌, ಆಂಧ್ರಪ್ರದೇಶ, ತೆಲಂಗಾಣದ ಕೆಲವು ಜಿಲ್ಲೆಗಳೂ ಸೇರಿವೆ.

ಲೇಹ್‌ನಲ್ಲಿ ಪೆಟ್ರೊಲ್ ಬೆಲೆ ಲೀಟರ್‌ಗೆ ₹100.3ಕ್ಕೆ ಏರಿಕೆಯಾಗಿದೆ. ಆಂಧ್ರಪ್ರದೇಶದಲ್ಲಿ ವಿಶಾಖಪಟ್ಟಣ ಹೊರತುಪಡಿಸಿ ಬಹುತೇಕ ಜಿಲ್ಲೆಗಳಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ ₹100ಗೆ ಮಾರಾಟವಾಗುತ್ತಿದೆ. ವಿಶಾಖಪಟ್ಟಣದಲ್ಲಿ ಡೀಸೆಲ್‌ನ ಬೆಲೆ ಪ್ರತಿ ಲೀಟರ್‌ಗೆ ₹94.08. ತೆಲಂಗಾಣದ ಆದಿಲಾಬಾದ್‌ನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ₹ 100.57 ಮತ್ತು ನಿಜಾಮಾಬಾದ್‌ನಲ್ಲಿ ₹ 100.17 ಆಗಿದೆ.

ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ ಪೆಟ್ರೋಲ್ ಬೆಲೆ ಲೀಟರ್‌ಗೆ 27 ಪೈಸೆ ಮತ್ತು ಡೀಸಲ್‌ ಬೆಲೆ ಲೀಟರ್‌ಗೆ 28 ಪೈಸೆ ಹೆಚ್ಚಿಸಲಾಗಿದೆ. ಹೊಸ ಬೆಲೆ ಪ್ರಕಾರ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ₹ 94.76, ಡೀಸೆಲ್ ಲೀಟರ್‌ಗೆ ₹ 85.66 ಆಗಿದೆ.

ಬಳ್ಳಾರಿಯಲ್ಲಿ ಪೆಟ್ರೋಲ್‌ ಲೀಟರ್‌ಗೆ ₹99.83 ಬೆಲೆಗೆ ಮಾರಾಟವಾಗುತ್ತಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ₹97.98 ಮತ್ತು ಡೀಸೆಲ್‌ ಲೀಟರ್‌ಗೆ ₹90.87 ಬೆಲೆಗೆ ಮಾರಾಟವಾಗುತ್ತಿದೆ.

ಕಳೆದ ಮೇ 4 ರಿಂದ ಇಲ್ಲಿವರೆಗೆ 18 ಬಾರಿ ತೈಲ ಬೆಲೆಯಲ್ಲಿ ಏರಿಕೆಯಾಗಿದೆ. ಒಟ್ಟು ಏರಿಕೆಯಾಗಿರುವ ಇಂಧನ ಬೆಲೆಯ ಪ್ರಕಾರ ಪೆಟ್ರೋಲ್ ಬೆಲೆ ಲೀಟರ್‌ಗೆ ₹4.36 ಮತ್ತು ಡೀಸೆಲ್‌ ಬೆಲೆ ಲೀಟರ್‌ಗೆ ₹4.93ರಷ್ಟು ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT