ಭಾನುವಾರ, ಮಾರ್ಚ್ 7, 2021
26 °C

ರಾಷ್ಟ್ರರಾಜಧಾನಿಯಲ್ಲಿ ₹85ರ ಗಡಿ ದಾಟಿದ ಲೀಟರ್‌ ಪೆಟ್ರೋಲ್‌ ದರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರಿಗೆ ₹ 85.20ಕ್ಕೆ ಏರಿಕೆಯಾಗಿದೆ. ಡೀಸೆಲ್‌ ದರವು ದಾಖಲೆ ಮಟ್ಟದ ಸಮೀಪಕ್ಕೆ ಬಂದಿದೆ.

ಪೆಟ್ರೋಲ್‌ ಮತ್ತು ಡೀಸೆಲ್‌ ದರ ಮಂಗಳವಾರ ಪ್ರತಿ ಲೀಟರಿಗೆ 25 ಪೈಸೆ ಹೆಚ್ಚಾಗಿದೆ. ಇದರಿಂದಾಗಿ ಪೆಟ್ರೋಲ್ ದರ ₹ 85.20ಕ್ಕೆ ಮತ್ತು ಡೀಸೆಲ್‌ ದರ ₹ 75.38ಕ್ಕೆ ಏರಿಕೆಯಾಗಿದೆ. ಮುಂಬೈನಲ್ಲಿ ಪೆಟ್ರೋಲ್‌ ದರ ₹ 91.80ಕ್ಕೆ ಮತ್ತು ಡೀಸೆಲ್‌ ದರ ₹ 82.13ಕ್ಕೆ ತಲುಪಿದೆ.

ಸೋಮವಾರವು ಇಂಧನ ದರ ಪ್ರತಿ ಲೀಟರಿಗೆ 25 ಪೈಸೆ ಹೆಚ್ಚಾಗಿತ್ತು. ಜನವರಿ 6ರಿಂದ ಇಲ್ಲಿಯವರೆಗೆ ಪ್ರತಿ ಲೀಟರ್‌ ಪೆಟ್ರೋಲ್ ದರ ₹ 1.49 ಮತ್ತು ಡೀಸೆಲ್‌ ದರ ₹ 1.51ರಷ್ಟು ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್ ದರ 25 ಪೈಸೆ ಹೆಚ್ಚಾಗಿ ₹ 88.07ಕ್ಕೆ ಹಾಗೂ ಡೀಸೆಲ್‌ ದರ 27 ಪೈಸೆ ಹೆಚ್ಚಾಗಿ ₹ 79.94ಕ್ಕೆ ಏರಿಕೆಯಾಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲ ದರ ಮತ್ತು ವಿದೇಶಿ ವಿನಿಮಯ ದರಕ್ಕೆ ಅನುಗುಣವಾಗಿ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಪೆಟ್ರೋಲ್‌, ಡೀಸೆಲ್‌ ದರ ಪರಿಷ್ಕರಣೆ ಮಾಡುತ್ತವೆ. ಸ್ಥಳೀಯ ಮಾರಾಟ ತೆರಿಗೆಗೆ ಅನುಗುಣವಾಗಿ ರಾಜ್ಯದಿಂದ ರಾಜ್ಯಕ್ಕೆ ದರದಲ್ಲಿ ವ್ಯತ್ಯಾಸ ಇರುತ್ತದೆ.

ಇದನ್ನೂ ಓದಿ: 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು