ಪೆಟ್ರೋಲ್, ಡೀಸೆಲ್ ಬೆಲೆ 35 ಪೈಸೆ ಹೆಚ್ಚಳ

ನವದೆಹಲಿ/ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಗುರುವಾರ ಲೀಟರ್ಗೆ ತಲಾ 35 ಪೈಸೆ ಹೆಚ್ಚಳ ಆಗಿದೆ. ಇದರಿಂದಾಗಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ ₹ 86.65 ಆಗಿದೆ. ಬೆಂಗಳೂರಿನಲ್ಲಿ ₹ 89.54, ಮುಂಬೈನಲ್ಲಿ 93.20 ಆಗಿದೆ.
ಡೀಸೆಲ್ ದರವು ದೆಹಲಿಯಲ್ಲಿ ₹ 76.83 ಆಗಿದೆ. ಬೆಂಗಳೂರಿನಲ್ಲಿ ₹ 81.44, ಮುಂಬೈನಲ್ಲಿ ₹ 83.67 ಆಗಿದೆ. ‘ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಬ್ಯಾರೆಲ್ಗೆ 59 ಡಾಲರ್ಗೆ ಹೆಚ್ಚಳವಾಗಿದೆ’ ಎಂದು ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ನ ಮುಖ್ಯಸ್ಥ ಮುಕೇಶ್ ಕುಮಾರ್ ಸುರಾನಾ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಗ್ರಾಹಕ ಪ್ರತಿ ಲೀಟರ್ ಪೆಟ್ರೋಲ್ಗೆ ಪಾವತಿಸುವ ಹಣದಲ್ಲಿ ₹ 32.90 ಕೇಂದ್ರ ಸರ್ಕಾರಕ್ಕೆ, ₹ 22.30 ರಾಜ್ಯ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಸಂದಾಯ ಆಗುತ್ತದೆ. ₹ 3.66 ಡೀಲರ್ಗೆ ಕಮಿಷನ್ ಆಗಿ ಪಾವತಿ ಆಗುತ್ತದೆ ಎಂದು ಬೆಂಗಳೂರಿನ ತೆರಿಗೆ ತಜ್ಞರೊಬ್ಬರು ಹೆಸರು ಉಲ್ಲೇಖಿಸಬಾರದು ಎಂಬ ಷರತ್ತಿನೊಂದಿಗೆ ತಿಳಿಸಿದರು.
ಲೀಟರ್ ಡೀಸೆಲ್ಗೆ ಪಾವತಿಸುವ ಹಣದಲ್ಲಿ ಕೇಂದ್ರಕ್ಕೆ ₹ 31.80, ರಾಜ್ಯ ಸರ್ಕಾರಕ್ಕೆ ₹ 15.30 ಸಂದಾಯ ಆಗುತ್ತದೆ. ₹ 2.52 ಡೀಲರ್ ಕಮಿಷನ್ ರೂಪದಲ್ಲಿ ಪಾವತಿ ಆಗುತ್ತದೆ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.