ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಏರಿಕೆ ಹಾದಿ ಹಿಡಿದ ಪೆಟ್ರೋಲ್‌–ಡೀಸೆಲ್‌: ಬೆಂಗಳೂರಲ್ಲಿ ಎಷ್ಟಿದೆ ತೈಲ ದರ?

Last Updated 28 ಅಕ್ಟೋಬರ್ 2021, 4:55 IST
ಅಕ್ಷರ ಗಾತ್ರ

ಬೆಂಗಳೂರು: ಅ. 25–26ರ ವರೆಗೆ ಏರಿಕೆ ಕಾಣದೇ ಸ್ಥಿರವಾಗಿದ್ದ ತೈಲ ದರ ನಂತರದ ಎರಡು ದಿನ ಸತತ ಏರಿಕೆ ಕಂಡಿದೆ.ಗುರುವಾರವೂ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಸುಮಾರು 35 ಪೈಸೆಗಳಷ್ಟು ಏರಿಕೆಯಾಗಿದ್ದು, ಗರಿಷ್ಠ ಮಟ್ಟ ತಲುಪಿದೆ.

ದೆಹಲಿಯಲ್ಲಿ ಈಗ ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆಯಲ್ಲಿ ಲೀಟರ್‌ ಮೇಲೆ 35 ಪೈಸೆ ಹೆಚ್ಚಾಗಿದೆ. ಪೆಟ್ರೋಲ್‌ ₹108.29 ಆಗಿದ್ದರೆ, ಡೀಸೆಲ್ ಈಗ ಲೀಟರ್‌ಗೆ ₹97.02 ರೂ ಆಗಿದೆ. ಮುಂಬೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ ₹114.14 ಮತ್ತು ₹105.12 ಇದೆ.

ಕೋಲ್ಕತ್ತದಲ್ಲಿ ಇಂದು ಪೆಟ್ರೋಲ್ ಬೆಲೆ ಲೀಟರ್‌ಗೆ ₹108.78 ಮತ್ತು ಡೀಸೆಲ್ ಲೀಟರ್‌ಗೆ ₹100.14 ಆಗಿದೆ. ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ₹105.13 ಮತ್ತು ಡೀಸೆಲ್ ₹101.25ಗೆ ತಲುಪಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್ 36 ಪೈಸೆ ಏರಿಕೆಯಾಗಿ ₹112.06 ಆಗಿದೆ. ಡೀಸೆಲ್‌ 37 ಪೈಸೆ ಹೆಚ್ಚಾಗಿದ್ದು, ₹102.98 ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT