ಮಂಗಳವಾರ, ಮಾರ್ಚ್ 21, 2023
29 °C

ಸಿಬ್ಬಂದಿ ಕಡಿತ... ಈಗ ಪಿಂಟರೆಸ್ಟ್‌ ಸರದಿ!

ರಾಯಿಟರ್ಸ್‌‌ Updated:

ಅಕ್ಷರ ಗಾತ್ರ : | |

ನವದೆಹಲಿ: ಸಾಮಾಜಿಕ ಮಾಧ್ಯಮ ಪಿಂಟರೆಸ್ಟ್‌ ಸುಮಾರು 150 ಉದ್ಯೋಗಿಗಳನ್ನು ಅಥವಾ ತನ್ನ ಒಟ್ಟಾರೆ ಉದ್ಯೋಗಿಗಳ ಪೈಕಿ ಶೇ 5ರಷ್ಟು ಮಂದಿಯನ್ನು ವಜಾ ಮಾಡುತ್ತಿದೆ ಎಂದು 'ಬ್ಲೂಮ್‌ಬರ್ಗ್ ನ್ಯೂಸ್' ಬುಧವಾರ ವರದಿ ಮಾಡಿದೆ. ವೆಚ್ಚ ಕಡಿತದ ಭಾಗವಾಗಿ ಸಂಸ್ಥೆ ಈ ನಿರ್ಧಾರಕ್ಕೆ ಬಂದಿದೆ.

‌ಆನ್‌ಲೈನ್ ಪಿನ್‌ಬೋರ್ಡ್‌ಗಳನ್ನು ರಚಿಸಲು ಬಳಕೆದಾರರಿಗೆ ಅವಕಾಶ ನೀಡುವ ಸಾಮಾಜಿಕ ಮಾಧ್ಯಮ ಕಂಪನಿ ಉದ್ಯೋಗ ಕಡಿತದ ಬಗ್ಗೆ ತನ್ನ ಸಿಬ್ಬಂದಿಗೆ ಬುಧವಾರ ಮಾಹಿತಿ ನೀಡಿದೆ ಎಂದು ಮೂಲಗಳು ತಿಳಿಸಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸ್ಯಾನ್ ಫ್ರಾನ್ಸಿಸ್ಕೊ ಮೂಲದ ಕಂಪನಿಯ ಎಲ್ಲ ವಿಭಾಗಗಳಲ್ಲಿ, ಎಲ್ಲ ಮಟ್ಟದಲ್ಲೂ ಉದ್ಯೋಗ ಕಡಿತವಾಗಲಿದೆ ಎಂದು ತಿಳಿದು ಬಂದಿದೆ.

‘ಕಂಪನಿಯ ಆದ್ಯತೆಗಳು ಮತ್ತು ದೀರ್ಘಾವಧಿಯ ಕಾರ್ಯತಂತ್ರಕ್ಕೆ ನಮ್ಮನ್ನು ಮತ್ತಷ್ಟು ಹೊಂದಿಸಿಕೊಳ್ಳಲು ನಾವು ಸಾಂಸ್ಥಿಕ ಬದಲಾವಣೆಗಳನ್ನು ಮಾಡುತ್ತಿದ್ದೇವೆ’ ಎಂದು ಕಂಪನಿಯ ವಕ್ತಾರರು ಹೇಳಿದ್ದು, ಉದ್ಯೋಗ ಕಡಿತವನ್ನು ದೃಢೀಕರಿಸಿದ್ದಾರೆ. ಆದರೆ ಎಷ್ಟು ಮಂದಿಯನ್ನು ಉದ್ಯೋಗದಿಂದ ತೆಗೆಯಲಾಗುತ್ತದೆ ಎಂಬುದರ ಬಗ್ಗೆ ಮಾಹಿತಿ ನೀಡಲು ಅವರು ನಿರಾಕರಿಸಿದರು.

ಪರಿವರ್ತನೆಯ ಸಮಯದಲ್ಲಿ ಕೆಲಸ ಕಳೆದುಕೊಳ್ಳಲಿರುವ ಉದ್ಯೋಗಿಗಳಿಗೆ ಪ್ಯಾಕೇಜ್‌, ನೆರವು ಮತ್ತು ಇತರ ಸೇವೆಗಳನ್ನು ನೀಡಿ ಸಹಾಯ ಮಾಡಲಾಗುವುದು ಎಂದೂ ವಕ್ತಾರರು ತಿಳಿಸಿದ್ದಾರೆ.

ಜಗತ್ತಿನಾದ್ಯಂತ ಹಲವು ಕಂಪನಿಗಳು ಸಿಬ್ಬಂದಿ ಕಡಿತ ಮಾಡುತ್ತಿವೆ. ಇತ್ತೀಚೆಗೆ ಫಿಲಿಪ್ಸ್‌ ಕಂಪನಿ ತನ್ನ 6,000 ಉದ್ಯೋಗಿಗಳನ್ನು ವಜಾ ಮಾಡುವುದಾಗಿ ಘೋಷಿಸಿತ್ತು. ಇನ್ನೊಂದೆಡೆ ಲಸಿಕೆ ತಯಾರಕ ಸಂಸ್ಥೆ ಸನೋಫಿ ಭಾರತದಲ್ಲಿನ ತನ್ನ ಎರಡು ಘಟಕಗಳನ್ನು ಮುಚ್ಚಲು ನಿರ್ಧರಿಸಿದ್ದು, ಸಿಬ್ಬಂದಿಗೆ ವಿಆರ್‌ಎಸ್‌ ಪಡೆಯಲು ಸೂಚಿಸಿದೆ.

ಇವುಗಳನ್ನೂ ಓದಿ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು