ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

5 ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಚಿನ್ನದ ಆಮದು ಅಡ್ಡಿ: ನೀಲೇಶ್‌ ಶಾ

Published 22 ನವೆಂಬರ್ 2023, 0:30 IST
Last Updated 22 ನವೆಂಬರ್ 2023, 0:30 IST
ಅಕ್ಷರ ಗಾತ್ರ

ಮುಂಬೈ: ಚಿನ್ನವನ್ನು ಆಮದು ಮಾಡಿಕೊಳ್ಳುವ ಚಾಳಿ ಇಲ್ಲದೇ ಇದ್ದಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ 5 ಟ್ರಿಲಿಯನ್ ಡಾಲರ್‌ ಆರ್ಥಿಕತೆಯ ಗುರಿಯನ್ನು ಭಾರತವು ಬಹಳ ಹಿಂದೆಯೇ ತಲುಪುತ್ತಿತ್ತು ಎಂದು ಪ್ರಧಾನ ಮಂತ್ರಿಯ ಆರ್ಥಿಕ ಸಲಹಾ ಸಮಿತಿಯ ಸದಸ್ಯ ನೀಲೇಶ್‌ ಶಾ ಹೇಳಿದ್ದಾರೆ.

21 ವರ್ಷಗಳಲ್ಲಿ ಭಾರತವು ₹41.50 ಲಕ್ಷ ಕೋಟಿ ಮೌಲ್ಯದ ಚಿನ್ನವನ್ನು ಆಮದು ಮಾಡಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ 5 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯನ್ನು ಸಾಧಿಸುವತ್ತ ನಾವು ಕೆಲಸ ಮಾಡುತ್ತಿದ್ದೇವೆ. ಆದರೆ, ಚಿನ್ನ ಆಮದು ಮಾಡಿಕೊಳ್ಳವ ಈ ಒಂದು ಚಾಳಿ ಇಲ್ಲದೇ ಇದ್ದಿದ್ದರೆ ಬಹಳ ಹಿಂದೆಯೇ ಆ ಗುರಿಯನ್ನು ನಾವು ತುಲುಪುತ್ತಿದ್ದೆವು. ಸರಿಯಾದ ಆರ್ಥಿಕ ಹೂಡಿಕೆಯನ್ನು ಅನುಸರಿಸದೇ ಇರುವುದರಿಂದ ಭಾರತದ ಜಿಡಿಪಿಯ ಮೂರರಲ್ಲಿ ಒಂದಂಶವನ್ನು ನಾವು ಕಳೆದುಕೊಂಡಿದ್ದೇವೆ ಎಂದು ಕೋಟಕ್‌ ಅಸೆಟ್‌ ಮ್ಯಾನೇಜ್ಮೆಂಟ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಅವರು ಹೇಳಿದ್ದಾರೆ.

ಕಸ್ಟಮ್ಸ್ ಇಲಾಖೆಯು ಜಪ್ತಿ ಮಾಡುತ್ತಿರುವ ಚಿನ್ನದ ಪ್ರಮಾಣವನ್ನು ಗಮನಿಸಿದರೆ ಚಿನ್ನದ ಕಳ್ಳಸಾಗಣೆಯು ಎಗ್ಗಿಲ್ಲದೇ ನಡೆಯುತ್ತಿದೆ ಎನ್ನುವುದನ್ನು ಗೊತ್ತಾಗುತ್ತದೆ ಎಂದಿದ್ದಾರೆ.

ಚಿನ್ನದಲ್ಲಿ ಹೂಡಿಕೆ ಮಾಡುವ ಬದಲಾಗಿ ಟಾಟಾ, ಅಂಬಾನಿ, ಬಿರ್ಲಾ, ವಾಡಿಯಾ ಮತ್ತು ಅದಾನಿಯಂತಹ ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದರೆ ನಮ್ಮ ಜಿಡಿಪಿಯ ಗಾತ್ರ ಎಷ್ಟಾಗುತ್ತಿತ್ತು ಕಲ್ಪಿಸಿಕೊಳ್ಳಿ? ನಮ್ಮ ತಲಾ ಆದಾಯ ಎಷ್ಟಿರುತ್ತಿತ್ತು? ಎಂದು ಅವರು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT