ಬುಧವಾರ, ಆಗಸ್ಟ್ 4, 2021
27 °C

ಡಿಎಚ್‌ಎಫ್‌ಎಲ್‌ನಿಂದ ₹ 3,688 ಕೋಟಿ ವಂಚನೆ: ಪಿಎನ್‌ಬಿ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಮುಂಬೈ: ಅಡಮಾನ ಸಾಲ ನೀಡುವ ದಿವಾನ್‌ ಹೌಸಿಂಗ್‌ ಫೈನಾನ್ಸ್‌ ಲಿಮಿಟೆಡ್‌ನ (ಡಿಎಚ್‌ಎಫ್‌ಎಲ್‌) ವಸೂಲಾಗದ ಸಾಲ (ಎನ್‌ಪಿಎ) ಖಾತೆಯಲ್ಲಿ ₹ 3,688.58 ಕೋಟಿ ವಂಚನೆ ನಡೆದಿರುವುದನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ಗಮನಕ್ಕೆ ತರಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ) ತಿಳಿಸಿದೆ.

ಡಿಎಚ್‌ಎಫ್‌ಎಲ್‌ ಖಾತೆಯಲ್ಲಿನ ವಂಚನೆಯನ್ನು ಆರ್‌ಬಿಐ ಗಮನಕ್ಕೆ ತರಲಾಗಿದೆ ಎಂದು ಬ್ಯಾಂಕ್‌  ಷೇರುಪೇಟೆಗೂ ಮಾಹಿತಿ ನೀಡಿದೆ. ವಸೂಲಾಗದ ಸಾಲಗಳ ವೆಚ್ಚ ಭರಿಸಲು ಬ್ಯಾಂಕ್‌ ಈಗಾಗಲೇ ₹ 1,246.58 ಕೋಟಿ ತೆಗೆದು ಇರಿಸಿದೆ.

ಡಿಎಚ್‌ಎಫ್‌ಎಲ್‌ ತಾನು ಬ್ಯಾಂಕ್‌ಗಳಿಂದ ಪಡೆದುಕೊಂಡ ₹ 97 ಸಾವಿರ ಕೋಟಿಗಳಲ್ಲಿ ₹ 31 ಸಾವಿರ ಕೋಟಿಗಳನ್ನು ನಕಲಿ ಕಂಪನಿಗಳ ಹೆಸರಿನಲ್ಲಿ ಬೇರೆಗೆ ಸಾಗಿಸಿ ವಂಚನೆ ಎಸಗಿದೆ ಎಂದು ಈ ಹಿಂದೆ ವರದಿಯಾಗಿತ್ತು.

ಈ ಬೆಳವಣಿಗೆ ಹಿನ್ನೆಲೆಯಲ್ಲಿ ಆರ್‌ಬಿಐ, ಹಿಂದಿನ ವರ್ಷದ ನವೆಂಬರ್‌ನಲ್ಲಿ ಡಿಎಚ್‌ಎಫ್‌ಎಲ್‌ ಅನ್ನು ದಿವಾಳಿ ಸಂಹಿತೆ  (ಐಬಿಸಿ) ಪ್ರಕ್ರಿಯೆಗೆ ಒಳಪಡಿಸಿತ್ತು. ಸಾಲ ಇತ್ಯರ್ಥಕ್ಕೆ ರಾಷ್ಟ್ರೀಯ ಕಂಪನಿ ಕಾಯ್ದೆ ನ್ಯಾಯಮಂಡಳಿಗೆ ಮೊರೆ ಹೋದ ಮೊದಲ ಹಣಕಾಸು ಸಂಸ್ಥೆ ಇದಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು