ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತಿಯ ಮೊಬೈಲ್ ರಿಚಾರ್ಜ್ ಅಂಗಡಿಗೆ ನನ್ನ ಹೆಸರಿನಲ್ಲಿ GST ಮಾಡಬಹುದೇ?

Last Updated 9 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

ಬ್ಯಾಂಕ್‌ ಹಾಗೂ ಅಂಚೆ ಕಚೇರಿ ಠೇವಣಿದಾರರು ಪ್ರತಿ ವರ್ಷ ತಾವು ಪಡೆಯುವ ಬಡ್ಡಿಗೆ ಮೂಲದಲ್ಲಿ ತೆರಿಗೆ ಮುರಿಯದಿರಲು (ಟಿಡಿಎಸ್‌) 15ಜಿ, 15ಎಚ್‌ ನಮೂನೆ ಅರ್ಜಿಗಳನ್ನು ಏಪ್ರಿಲ್‌ 30ರ ಒಳಗೆ ಸಲ್ಲಿಸಬೇಕು. ಇದನ್ನು ಆದಾಯ ತೆರಿಗೆಗೆ ಒಳಗಾಗದವರು, ಮಾತ್ರ ಸಲ್ಲಿಸಬಹುದು.
-ಠೇವಣಿ ಮೇಲಿನ ಬಡ್ಡಿಗೆ ಮೂಲದಲ್ಲಿ ತೆರಿಗೆ ಕಡಿತ (ಟಿಡಿಎಸ್‌)

ಉತ್ತರ:ಸೆಕ್ಷನ್‌ 194ಎ ಆಧಾರದ ಮೇಲೆ ಬ್ಯಾಂಕ್‌–ಅಂಚೆ ಕಚೇರಿಗಳಲ್ಲಿ, ಹಿರಿಯ ನಾಗರಿಕರಾದಲ್ಲಿ ₹ 50 ಸಾವಿರ ವಾರ್ಷಿಕ ಬಡ್ಡಿ, ಇತರರು₹ 40 ಸಾವಿರ ಮಿತಿ ದಾಟಿದಲ್ಲಿ ಮೂಲದಲ್ಲಿ ಶೇ 10ರಷ್ಟು ತೆರಿಗೆ ಮುರಿದು ಆದಾಯ ತೆರಿಗೆ ಇಲಾಖೆಗೆ ರವಾನಿಸುತ್ತಾರೆ. ಇದೇ ವೇಳೆ, ಹಿರಿಯ ನಾಗರಿಕರು ‘15 ಎಚ್‌’, ಇತರರು ‘15 ಜಿ’ ನಮೂನೆ ಸಲ್ಲಿಸಿದರೆಟಿಡಿಎಸ್‌ ಮಾಡುವುದಿಲ್ಲ.

ಸೆಕ್ಷನ್‌ 80ಟಿಟಿಎ ಆಧಾರದ ಮೇಲೆ ಹಿರಿಯ ನಾಗರಿಕರಲ್ಲದವರಿಗೆ ಉಳಿತಾಯ ಖಾತೆಯಲ್ಲಿ ಇರುವ ವಾರ್ಷಿ ಗರಿಷ್ಠ ಬಡ್ಡಿ ₹ 10 ಸಾವಿರ ತನಕ ಆದಾಯ ತೆರಿಗೆ ವಿನಾಯ್ತಿ ಇದೆ. ಅದೇ ರೀತಿ ಸೆಕ್ಷನ್ 80ಟಿಟಿಬಿ ಆಧಾರದ ಮೇಲೆ ಹಿರಿಯ ನಾಗರಿಕರಿಗೆ ಉಳಿತಾಯ ಖಾತೆ ಹಾಗೂ ಇತರೆ ಠೇವಣಿ ಸೇರಿಸಿ ಬರುವ ವಾರ್ಷಿಕ ಬಡ್ಡಿ ₹ 50 ಸಾವಿರದ ತನಕ ಆದಾಯ ತೆರಿಗೆ ವಿನಾಯ್ತಿ ಇದೆ.ಮೇಲೆ ವಿವರಿಸಿದಂತೆ ತಪ್ಪದೇ ಈ ತಿಂಗಳ 30ರ ಒಳಗೆ 15ಜಿ ಮತ್ತು 15ಎಚ್‌ ಸಲ್ಲಿಸಿ, ನಿಶ್ಚಿಂತರಾಗಿರಿ.

**
ಮ್ಯೂಚುವಲ್‌ ಫಂಡ್‌ನಲ್ಲಿ 3–4 ವರ್ಷಗಳಿಗೆ ಹಣ ಇರಿಸಬೇಕೆಂದಿದ್ದೇನೆ. SIPನಿಂದ ಪ್ರಾರಂಭಿಸಬೇಕೆಂದಿದ್ದೇನೆ. ಪ್ರಶ್ನೆ: 1) ಮ್ಯೂಚುವಲ್ ಫಂಡ್‌ ಹೇಗೆ ಆಯ್ದುಕೊಳ್ಳಬೇಕು, 2) Large Capital - Small Capital-Mid capital-diversification- ಇವುಗಳಲ್ಲಿ ಯಾವುದನ್ನೂ ಆರಿಸಿಕೊಳ್ಳಲಿ (3) ಹಣ ಕೊಟ್ಟರೆ ಈ ವಿಚಾರದಲ್ಲಿ ಸೇವೆ ದೊರೆಯುತ್ತಿದೆಯೇ?
-
ಫಣಿಕುಮಾರ್, ಊರುಬೇಡ

ಉತ್ತರ: ನೀವುSIP ನಿಂದ ಪ್ರಾರಂಭಿಸುವುದು ನನಗೆ ಸಂತಸ ತಂದಿದೆ. ಇಲ್ಲಿ ಪ್ರತೀ ತಿಂಗಳೂ ಒಂದಿಷ್ಟು ಹಣ ಹೂಡುವಾಗ ವರ್ಷಾಂತ್ಯಕ್ಕೆ, ಸಂವೇದಿ ಸೂಚ್ಯಂಕ (SENSEX) ಏರುಪೇರಾದರೂ ನಷ್ಟದ ಸಂದರ್ಭ ಕಡಿಮೆ. ಈ ವಿಚಾರದಲ್ಲಿ ಸರಿಯಾದ ಮಾರ್ಗದರ್ಶನ ಕೊಡುವವರು ಇಲ್ಲ. ಏಜೆಂಟರು ಅವರ ಪ್ರಾಡಕ್ಟ್ ಮಾರಾಟ ಮಾಡಲು ಪ್ರಯತ್ನಿಸುತ್ತಾರೆ. ಮ್ಯೂಚುವಲ್ ಫಂಡ್‌ ಹೂಡಿಕೆಯಲ್ಲಿ large Capital ಆರಿಸಿಕೊಳ್ಳಿ. ಹೀಗೆ ಆರಿಸಿಕೊಳ್ಳುವಾಗ DEBT-EQUITY ಫಂಡ್ ಆರಿಸಿಕೊಳ್ಳಿ.DEBTಅಂದರೆ ಸರ್ಕಾರಿ ಬಾಂಡ್‌ಗಳು. ಇಲ್ಲಿ ಖಚಿತ ಆದಾಯ ಬಂದು, ಒಟ್ಟಿನಲ್ಲಿ ಮುಂದೆ ಲಾಭ ಬರುತ್ತದೆ.

**

ನಾನು ಸರ್ಕಾರಿ ಶಾಲಾ ಶಿಕ್ಷಕಿ. ಪತಿ ಮೊಬೈಲ್ ರಿಚಾರ್ಜ್ ಅಂಗಡಿ ಪ್ರಾರಂಭಿಸಲು ನನ್ನ ಹೆಸರಿನಲ್ಲಿ GST ಮಾಡಬೇಕೆಂದಿದ್ದಾರೆ. ಇದರಿಂದ ನನಗೆ ತೊಂದರೆ ಇದೆಯಾ?
-ಹೆಸರು, ಊರು ಬೇಡ​

ಉತ್ತರ: ನೀವು ಸರ್ಕಾರಿ ನೌಕರಿಯಲ್ಲಿದ್ದು, ನಿಮ್ಮ ಪತಿ ಮಾಡುವ ಮೊಬೈಲ್ ರಿಚಾರ್ಜ್ ಅಂಗಡಿಯGST ನಿಮ್ಮ ಹೆಸರಿನಲ್ಲಿ ಮಾಡುವುದು ಅಪರಾಧವಾಗುತ್ತದೆ. ಅವರ ಹೆಸರಿನಲ್ಲಿಯೇ ಮಾಡಲಿ. ಮುಂದೆ ಸಾಲ ಪಡೆಯಲು ಕೂಡಾ ಅವರಿಗೆ ಅನುಕೂಲವಾಗುತ್ತದೆ.

**

ನಿವೃತ್ತಿ ಹೊಂದಿದ ವ್ಯಕ್ತಿ. ನನ್ನ ಹೆಸರಿನಲ್ಲಿ ನಿವೇಶನ ಇದೆ. ಮಾರಾಟ ಮಾಡಿದರೆ₹ 30 ಲಕ್ಷ ಬರಬಹುದು. ಸರ್ಕಾರಿ ಬಾಂಡ್‌ ಹೊರತುಪಡಿಸಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ದೀರ್ಘಾವಧಿ ಠೇವಣಿ ಇರಿಸಿದರೆ ತೆರಿಗೆ ಉಳಿಸಬಹುದೇ ಹಾಗೂ ಕಾಲ ಕಾಲಕ್ಕೆ ಬಡ್ಡಿ‍ಪಡೆಯಬಹುದೇ?
-ಹೆಸರು, ಊರು ಬೇಡ​

ಉತ್ತರ: ನಿವೇಶನ ಮಾರಾಟ ಮಾಡಿ ಬರುವ ಲಾಭದಿಂದ ಇನ್ನೊಂದು ಮನೆ ಕೊಳ್ಳುವಲ್ಲಿ ಅಥವಾ NHAI ಅಥವಾ RECನಲ್ಲಿ 5 ವರ್ಷ ಹಣ ಇಡುವಲ್ಲಿ Capital Gain Tax ಉಳಿಸಬಹುದು. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಇರಿಸಿ ತೆರಿಗೆ ವಿನಾಯ್ತಿ ಪಡೆಯುವಂತಿಲ್ಲ.NHAI / REC ಬಾಂಡ್‌ಗಳಲ್ಲಿ ಇರಿಸಿದರೆ ಕಾಲಕಾಲಕ್ಕೆ ಬಡ್ಡಿ ಪಡೆಯಬಹುದು ಹಾಗೂ ಅಸಲು 5 ವರ್ಷ ಮುಟ್ಟುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT