ಬೆಂಗಳೂರು: ಯಪಿಐ ಪಾವತಿ ವ್ಯವಸ್ಥೆಯು ಯಾವತ್ತಿಗೂ ಉಚಿತವಾಗಿ ಇರಲು ಸಾಧ್ಯವಿಲ್ಲ ಎಂಬ ಮಾತನ್ನು ತಾವು ಹೇಳಿಲ್ಲ ಎಂದು ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಸ್ಪಷ್ಟಪಡಿಸಿದ್ದಾರೆ.

‘ಎಂಡಿಆರ್ ಶುಲ್ಕವನ್ನು ಗ್ರಾಹಕರಿಗೆ ವರ್ಗಾಯಿಸಲಾಗುತ್ತದೆಯೇ ಎಂಬ ಪ್ರಶ್ನೆಯನ್ನು ನನಗೆ ಕೇಳಲಾಗಿತ್ತು. ಒಂದಿಷ್ಟು ವೆಚ್ಚಗಳು ಇರುತ್ತವೆ. ವೆಚ್ಚಗಳನ್ನು ಯಾರೋ ಒಬ್ಬರು ಪಾವತಿಸಬೇಕಾಗುತ್ತದೆ. ಯಾರು ಪಾವತಿಸಬೇಕಾಗುತ್ತದೆ ಎಂಬುದು ಮುಖ್ಯ... ವ್ಯವಸ್ಥೆಯು ಸುಸ್ಥಿರವಾಗಿ ಇರಲು ವೈಯಕ್ತಿಕ ಮಟ್ಟದಲ್ಲಿ ಅಥವಾ ವ್ಯವಸ್ಥೆಯ ಮಟ್ಟದಲ್ಲಿ ಯಾರಾದರೂ ಹಣ
ಪಾವತಿಸಬೇಕಾಗುತ್ತದೆ’ ಎಂದು ಅವರು ವಿವರಣೆ ನೀಡಿದ್ದಾರೆ.

‘ವ್ಯವಸ್ಥೆಯು ಈಗಲೂ ಉಚಿತವಾಗಿ ಇಲ್ಲ. ಅದಕ್ಕೆ ಯಾರೋ ಶುಲ್ಕ ನೀಡುತ್ತಿದ್ದಾರೆ, ಸರ್ಕಾರವು ವ್ಯವಸ್ಥೆಗೆ ಸಬ್ಸಿಡಿ ನೀಡುತ್ತಿದೆ... ಬಳಕೆದಾರರು ಶುಲ್ಕ ಪಾವತಿಸಬೇಕಾಗುತ್ತದೆ ಎಂಬ ಮಾತನ್ನು ನಾನು ಯಾವತ್ತೂ ಹೇಳಿಲ್ಲ’ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.