ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಗವರ್ನರ್ ಶಕ್ತಿಕಾಂತ್ ದಾಸ್ ಅವರು ಶನಿವಾರ ವಿವಿಧ ಬ್ಯಾಂಕ್ಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಹಣಕಾಸು ಮಾರುಕಟ್ಟೆಯ ಸ್ಥಿತಿಗತಿಯ ಕುರಿತು ಪರಾಮರ್ಶೆ ನಡೆಸಿದರು.

ಕೋವಿಡ್–19 ಬಿಕ್ಕಟ್ಟಿನಿಂದಾಗಿ ದೇಶ ಹಣಕಾಸು ವ್ಯವಸ್ಥೆಯಲ್ಲಿ ಮೂಡಿರುವ ಒತ್ತಡವನ್ನು ಕಡಿಮೆ ಮಾಡಲು ಘೋಷಿಸಿರುವ ಕ್ರಮಗಳು ಯಾವ ರೀತಿಯಲ್ಲಿ ಜಾರಿಗೊಂಡಿವೆ ಎನ್ನುವುದರ ಬಗ್ಗೆ ಪರಿಶೀಲನೆಯನ್ನೂ ನಡೆಸಲಾಯಿತು.

ವಿಡಿಯೊ ಕಾನ್ಫರೆನ್ಸ್ ಮೂಲಕ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್ಗಳ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಇಒಗಳೊಂದಿಗೆ ಸಂವಾದ ನಡೆಸಿ ದರು.ಲಾಕ್ಡೌನ್ ಅವಧಿಯಲ್ಲಿ ಕಾರ್ಯಾಚರಣೆಯಲ್ಲಿ ಸಹಜ ಸ್ಥಿತಿ ಕಾಯ್ದುಕೊಂಡಿರುವ ಬ್ಯಾಂಕ್ಗಳ ಪ್ರಯ ತ್ನಕ್ಕೆ ದಾಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿವಿಧ ವಲಯಗಳಿಗೆ ನಗದು ಹರಿವು, ಬ್ಯಾಂಕೇತರ ಹಣಕಾಸು ಸಂಸ್ಥೆ ಗಳ ನಗದು ಸ್ಥಿತಿ, ಕಿರು ಹಣಕಾಸು ಕಂಪನಿಗಳು, ಗೃಹ ಹಣಕಾಸು ಕಂಪನಿ ಗಳು, ಮ್ಯೂಚುವಲ್ ಫಂಡ್ಗಳ ಆರ್ಥಿಕ ಸ್ಥಿತಿಗತಿ, ದುಡಿಯು ಬಂಡವಾಳ ಪೂರೈಕೆ, ಅದರಲ್ಲಿಯೂಎಂಎಸ್ ಎಂಇಗಳಿಗೆ ನಗದು ಪೂರೈಕೆಗೆ ಆದ್ಯತೆ ನೀಡುವುದು, ಇಎಂಐ ಮುಂದೂಡಿಕೆ ಯೋಜನೆಯ ಬಗ್ಗೆಯೂ ಬ್ಯಾಂಕ್ ಅಧಿಕಾರಿಗಳಿಂದ ವಿವರ ಪಡೆದರು.

ಸರಣಿ ಸಭೆ ನಡೆಸಿದ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಸಚಿವರು ಮತ್ತು ಹಲವು ಇಲಾಖೆಗಳ ಮುಖ್ಯಸ್ಥರೊಂದಿಗೆ ಸರಣಿ ಸಭೆಗಳನ್ನು ನಡೆಸಿದರು.

ಲಾಕ್ಡೌನ್ನಿಂದಾಗಿ ನಷ್ಟ ಅನುಭವಿಸುತ್ತಿರುವ ವಲಯಗಳ ಪುನಶ್ಚೇತನಕ್ಕೆ ಕೈಗೊಂಡಿರುವ ಕ್ರಮಗಳ ಕುರಿತುಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಚರ್ಚೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.