ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ ಪಾವತಿ ಯುಪಿಐನಲ್ಲಿ ಶೀಘ್ರ ಹೊಸ ವೈಶಿಷ್ಟ್ಯ

Last Updated 7 ಡಿಸೆಂಬರ್ 2022, 21:23 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಆನ್‌ಲೈನ್‌ ಮೂಲಕ ಖರೀದಿಸಿದ ವಸ್ತು ಗ್ರಾಹಕರ ಕೈಸೇರಿದ ಬಳಿಕವೇ ಅವರ ಖಾತೆಯಿಂದ ಹಣವು ವ್ಯಾಪಾರಿಗೆ ಸಂದಾಯ ಆಗುವಂತಹ ವೈಶಿಷ್ಟ್ಯವು ಯುಪಿಐ ವೇದಿಕೆಯಲ್ಲಿ ಶೀಘ್ರದಲ್ಲೇ ಸಿಗಲಿದೆ.

ಯುಪಿಐ ವ್ಯವಸ್ಥೆಯಲ್ಲಿ ‘ಸಿಂಗಲ್‌–ಬ್ಲಾಕ್‌–ಆ್ಯಂಡ್‌–ಮಲ್ಟಿಪಲ್‌–ಡೆಬಿಟ್ಸ್‌’ ಸೌಲಭ್ಯವನ್ನು ಪರಿಚಯಿಸಲು ನಿರ್ಧರಿಸ ಲಾಗಿದೆ. ಇದರಿಂದಾಗಿ ಇ–ಕಾಮರ್ಸ್‌ ವೇದಿಕೆಗಳ ಮೂಲಕ ಖರೀದಿಸುವ ವಸ್ತುಗಳಿಗೆ ಪಾವತಿ ಮತ್ತು ಸಾಲಪತ್ರಗಳ ಮೇಲಿನ ಹೂಡಿಕೆಯು ಸುಲಭವಾಗಲಿದೆ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ತಿಳಿಸಿದ್ದಾರೆ.

ವ್ಯಾಪಾರಿಗೆ ಪಾವತಿಸಬೇಕಿರುವ ನಿರ್ದಿಷ್ಟ ಮೊತ್ತವು ಗ್ರಾಹಕರ ಖಾತೆಯಲ್ಲಿ ಬ್ಲಾಕ್‌ ಆಗಿರುತ್ತದೆ. ಸರಕು ಅಥವಾ ಸೇವೆಯು ಗ್ರಾಹಕರ ಕೈ ಸೇರುವವರೆಗೂ ಆ ಮೊತ್ತವು ಗ್ರಾಹಕರ ಖಾತೆಯಲ್ಲಿಯೇ ಇರುತ್ತದೆ. ವಸ್ತು ಕೈಗೆ ಸಿಕ್ಕ ಬಳಿಕ ಹಣವನ್ನು ಗ್ರಾಹಕರ ಖಾತೆಯಿಂದ ವ್ಯಾಪಾರಿಯ ಖಾತೆಗೆ ವರ್ಗಾವಣೆ ಮಾಡುವ ಸೌಲಭ್ಯ ಇದು ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT