ಬೆಂಗಳೂರು: ಖೋಡೆ ಇಂಡಿಯಾ ಲಿಮಿಟೆಡ್ನಿಂದ ‘ರೆಡ್ ನೈಟ್ ಪ್ರೀಮಿಯಂ ಬ್ಲೆಂಡೆಡ್ ವಿಸ್ಕಿ’ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.

ಖೋಡೆ ಗ್ರೂಪ್ನ ನಿರ್ದೇಶಕ ಆದಿತ್ಯ ಖೋಡೆ ಮತ್ತು ಕಂಪನಿಯ ಸಿಒಒ ಸತ್ಪಾಲ್ ಚೌಧರಿ ಅವರು ‘ರೆಡ್ ನೈಟ್ ಪ್ರೀಮಿಯಂ ಬ್ಲೆಂಡೆಡ್ ವಿಸ್ಕಿ’ ಬಾಟಲ್ ಅನ್ನು ಶನಿವಾರ ಅನಾವರಣ ಮಾಡಿದರು.

ಈ ವೇಳೆ ಮಾತನಾಡಿದ ಆದಿತ್ಯ ಖೋಡೆ, ‘ಖೋಡೆ ಕಂಪನಿಯು 1950ರಲ್ಲಿ ರಮ್ ಮತ್ತು ಬ್ರ್ಯಾಂಡಿ ತಯಾರಿಸಲು ಆರಂಭಿಸಿತು. 1967ರಲ್ಲಿ ರೆಡ್ ನೈಟ್ ಮಾಲ್ಟ್ ವಿಸ್ಕಿ ಬಿಡುಗಡೆ ಮಾಡಲಾಗಿತ್ತು. ಈಗ ಹೊಸ ತಲೆಮಾರಿನವರನ್ನು ಆಕರ್ಷಿಸಲು ಸುವಾಸನೆ ಭರಿತ, ವಿಭಿನ್ನ ರುಚಿ ಹೊಂದಿರುವ ಹಾಗೂ ಗುಣಮಟ್ಟದ ಬ್ಲೆಂಡೆಡ್ ವಿಸ್ಕಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಇದನ್ನು ಹೆಚ್ಚಾಗಿ ಸೇನಾ ಕ್ಯಾಂಟೀನ್ಗಳಲ್ಲೂ ಬಳಸಲಾಗುತ್ತದೆ’ ಎಂದು ಹೇಳಿದರು.

‘ಈಗಾಗಲೇ ಮಾರುಕಟ್ಟೆಯಲ್ಲಿ ಕಂಪನಿಯ ಹಲವು ಬ್ರ್ಯಾಂಡ್ನ ವಿಸ್ಕಿಗಳು ಲಭ್ಯ ಇದೆ. ಇವುಗಳ ಸಾಲಿಗೆ ರೆಡ್ ನೈಟ್ ಸೇರ್ಪಡೆಯಾಗಲಿದೆ. ಗುಣಮಟ್ಟಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ. ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು, ಕಂಪನಿಯು ಭಾರತ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸ್ಥಿರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ತನ್ನ ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸಿದೆ. ಕಂಪನಿಯ ವಿಸ್ಕಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಫೆಬ್ರುವರಿಯಲ್ಲಿ ಸಿಂಗಲ್ ಮಾಲ್ಟ್ ವಿಸ್ಕಿಯನ್ನು ಬಿಡುಗಡೆ ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.

ಮದ್ಯ ಮಾರಾಟ ಮಳಿಗೆಗಳಲ್ಲಿ ವಿಸ್ಕಿಯು 750 ಎಂ.ಎಲ್ ಬಾಟಲ್ಗೆ ₹1,425 ಹಾಗೂ 180 ಎಂ.ಎಲ್ನ ಬಾಟಲ್ಗೆ ₹345ನಲ್ಲಿ ಲಭ್ಯವಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.