ನವದೆಹಲಿ: ರಷ್ಯಾದ ತೈಲ ಕಂಪನಿಗಳ ಮೇಲೆ ಅಮೆರಿಕವು ನಿರ್ಬಂಧ ಹೇರಿರುವ ಪರಿಣಾಮವಾಗಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ರಷ್ಯಾದಿಂದ ತೈಲ ಆಮದನ್ನು ಕಡಿಮೆ ಮಾಡುವ ಆಲೋಚನೆಯಲ್ಲಿದೆ ಎಂದು ಮೂಲಗಳು ಹೇಳಿವೆ.

ರಷ್ಯಾ ಕಂಪನಿಗಳ ಮೇಲಿನ ನಿರ್ಬಂಧದ ಪರಿಣಾಮಗಳ ಬಗ್ಗೆ ಸರ್ಕಾರಿ ಸ್ವಾಮ್ಯದ ಕಂಪನಿಗಳು ಪರಿಶೀಲನೆ ನಡೆಸುತ್ತಿವೆ. ಆದರೆ ಅವು ಬಹುಪಾಲು ಕಚ್ಚಾ ತೈಲವನ್ನು ಯುರೋಪಿನ ವರ್ತಕರಿಂದ (ಇವರ ಮೇಲೆ ನಿರ್ಬಂಧ ಇಲ್ಲ) ಖರೀದಿಸುತ್ತಿವೆ. ಹೀಗಾಗಿ ಅವು ರಷ್ಯಾದಿಂದ ಕಚ್ಚಾ ತೈಲ ಖರೀದಿಯನ್ನು ತಕ್ಷಣಕ್ಕೆ ನಿಲ್ಲಿಸಲಿಕ್ಕಿಲ್ಲ ಎಂದು ಮೂಲಗಳು ಹೇಳಿವೆ.

ರಿಲಯನ್ಸ್ ಕಂಪನಿಯು ರಷ್ಯಾದಿಂದ ಪ್ರತಿದಿನ ಸರಿಸುಮಾರು 8.5 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ರಿಯಾಯಿತಿ ಬೆಲೆಗೆ ಖರೀದಿಸಿದೆ. ಈ ಕಚ್ಚಾ ತೈಲವನ್ನು ಸಂಸ್ಕರಿಸಿ ಅದು ಪೆಟ್ರೋಲ್, ಡೀಸೆಲ್ ಮತ್ತು ಎಟಿಎಫ್ಅನ್ನು ಅಮೆರಿಕ, ಯುರೋಪಿನ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ. ಇದರಿಂದ ಉತ್ತಮ ಲಾಭ ಗಳಿಸುತ್ತಿದೆ.

ಆದರೆ ಅಮೆರಿಕವು ರಷ್ಯಾದ ರೊಸ್ನೆಫ್ಟ್ ಮತ್ತು ಲುಕಾಯಿಲ್ ಕಂಪನಿಗಳ ಮೇಲೆ ನಿರ್ಬಂಧ ವಿಧಿಸಿರುವ ಪರಿಣಾಮವಾಗಿ, ರಿಲಯನ್ಸ್ನ ವಹಿವಾಟಿನ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ರಷ್ಯಾದ ಈ ಎರಡು ಕಂಪನಿಗಳಿಂದ ಕಚ್ಚಾ ತೈಲ ಖರೀದಿಸುವವರು ಸಿವಿಲ್ ಹಾಗೂ ಕ್ರಿಮಿನಲ್ ಕ್ರಮ ಎದುರಿಸಬೇಕಾಗುತ್ತದೆ.

ರಿಲಯನ್ಸ್ ಕಂಪನಿಯು ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡುವ, ಸ್ಥಗಿತಗೊಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ರಿಲಯನ್ಸ್ ಕಂಪನಿಯು ಅಮೆರಿಕದಲ್ಲಿ ಹೆಚ್ಚಿನ ವಾಣಿಜ್ಯ ಹಿತಾಸಕ್ತಿ ಹೊಂದಿದೆ. ಈ ವಿಚಾರವಾಗಿ ರಿಲಯನ್ಸ್ನಿಂದ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ರಿಲಯನ್ಸ್ ಕಂಪನಿಯು ಕಚ್ಚಾ ತೈಲ ಖರೀದಿಯನ್ನು ಇತರ ಕಡೆಗಳಿಂದ ಮಾಡುವ ಪ್ರಕ್ರಿಯೆ ಶುರುಮಾಡಿದೆ ಎಂದು ಗೊತ್ತಾಗಿದೆ. ರೊಸ್ನೆಫ್ಟ್ ಹಾಗೂ ಲುಕಾಯಿಲ್ ಕಂಪನಿಗಳ ಜೊತೆಗಿನ ವಹಿವಾಟನ್ನು ನವೆಂಬರ್ 21ಕ್ಕೆ ಮೊದಲು ನಿಲ್ಲಿಸಬೇಕಿದೆ.

ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವ ನಯಾರಾ ಎನರ್ಜಿ (ಇದಕ್ಕೆ ರೊಸ್ನೆಫ್ಟ್ ಹೂಡಿಕೆ ಇದೆ) ಕಂಪನಿ ಕೂಡ ಅಮೆರಿಕ ಹೇರಿರುವ ನಿರ್ಬಂಧದ ಬಿಸಿ ಅನುಭವಿಸಬೇಕಿದೆ.

ರಷ್ಯಾದ ಕಚ್ಚಾ ತೈಲ ಸಂಸ್ಕರಿಸಿ ಸಿದ್ಧಪಡಿಸಿದ ಇಂಧನ ಆಮದನ್ನು ಜನವರಿ 21ರಿಂದ ಅನ್ವಯವಾಗುವಂತೆ ಐರೋಪ್ಯ ಒಕ್ಕೂಟ ನಿರ್ಬಂಧಿಸಿದೆ. ರಿಲಯನ್ಸ್ ಮತ್ತು ಎಂಆರ್ಪಿಎಲ್ ಐರೋಪ್ಯ ಒಕ್ಕೂಟಕ್ಕೆ ಇಂಧನ ರಫ್ತು ಮಾಡಬೇಕು ಎಂದಾರೆ ರಷ್ಯಾದಿಂದ ಕಚ್ಚಾ ತೈಲ ಖರೀದಿಸುವುದನ್ನು ಕಡಿಮೆ ಮಾಡಬೇಕಾಗುತ್ತದೆ ಎಂದು ಮೂಲಗಳು ಹೇಳಿವೆ.

ಸರ್ಕಾರಿ ಕಂಪನಿಗಳಿಂದ ಖರೀದಿ ಅಬಾಧಿತ?

ಸರ್ಕಾರಿ ಸ್ವಾಮ್ಯದ ತೈಲ ಸಂಸ್ಕರಣಾ ಕಂಪನಿಗಳು ಮಧ್ಯವರ್ತಿ ವರ್ತಕರ ಮೂಲಕ ರಷ್ಯಾದ ಕಚ್ಚಾ ತೈಲ ಖರೀದಿಸುವುದನ್ನು ಸದ್ಯಕ್ಕಂತೂ ಮುಂದುವರಿಸುವ ನಿರೀಕ್ಷೆ ಇದೆ.

ಸರ್ಕಾರಿ ಸ್ವಾಮ್ಯದ ಕಂಪನಿಗಳು ರೊಸ್ನೆಫ್ಟ್ ಅಥವಾ ಲುಕಾಯಿಲ್ ಕಂಪನಿ ಜೊತೆ ಒಪ್ಪಂದ ಹೊಂದಿಲ್ಲ. ಅವು ಟೆಂಡರ್ ಮೂಲಕ ರಷ್ಯಾದ ಕಚ್ಚಾ ತೈಲ ಖರೀದಿಸುತ್ತಿವೆ. ಈ ಟೆಂಡರ್ ಪ್ರಕ್ರಿಯೆಗಳಲ್ಲಿ ಯುರೋಪಿನ ಅಥವಾ ದುಬೈ ಸಿಂಗಪುರ ಮೂಲದ ತೈಲ ವ್ಯಾಪಾರಿಗಳು ಇರುತ್ತಾರೆ. ನಿರ್ಬಂಧದ ವ್ಯಾಪ್ತಿಯಲ್ಲಿ ಈ ವ್ಯಾಪಾರಿಗಳು ಇಲ್ಲ.

ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಭಾರತ್ ಪೆಟ್ರೋಲಿಯಂ ಹಿಂದುಸ್ತಾನ್ ಪೆಟ್ರೋಲಿಯಂ ಎಂಆರ್ಪಿಎಲ್ ಹಾಗೂ ಎಚ್ಪಿಸಿಎಲ್–ಮಿತ್ತಲ್ ಎನರ್ಜಿ ಕಂಪನಿಗಳು ರಷ್ಯಾದ ಕಚ್ಚಾ ತೈಲ ಖರೀದಿಸುತ್ತಿವೆ. ಕೆಲವು ವರ್ತಕರು ರಷ್ಯಾದ ಕಚ್ಚಾ ತೈಲ ಖರೀದಿಸಲು ಹಿಂದೇಟು ಹಾಕಿದರೂ ದುಬೈನಲ್ಲಿ ಹೊಸ ವರ್ತಕರನ್ನು ರಾತ್ರೋರಾತ್ರಿ ನೋಂದಾಯಿಸುವ ಶಕ್ತಿ ರಷ್ಯಾಕ್ಕೆ ಇದೆ. ಈ ವರ್ತಕರು ರಷ್ಯಾದ ಕಂಪನಿಗಳಿಂದ ಕಚ್ಚಾ ತೈಲ ಖರೀದಿಸಿ ಅದನ್ನು ಭಾರತ ಮತ್ತು ಚೀನಾಕ್ಕೆ ಮಾರಾಟ ಮಾಡಬಲ್ಲರು ಎಂದು ಮೂಲಗಳು ವಿವರಿಸಿವೆ.

ತೈಲ ಮಾರುಕಟ್ಟೆಯು ಅಮೆರಿಕದ ನಿರ್ಬಂಧದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ನಿರ್ಬಂಧಗಳು ಬಹಳ ಕಠಿಣ ಎಂದಾಗಿದ್ದರೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಬ್ಯಾರೆಲ್ಗೆ 5ರಿಂದ 10 ಡಾಲರ್ನಷ್ಟು ಹೆಚ್ಚಾಗುತ್ತಿತ್ತು. ಆದರೆ 2 ಡಾಲರ್ನಷ್ಟೇ ಹೆಚ್ಚಳ ಆಗಿದೆ. ಅಂದರೆ ರಷ್ಯಾದಿಂದ ಸಿಗುವ ಅಷ್ಟೂ ಕಚ್ಚಾ ತೈಲ ಇನ್ನು ಮುಂದೆ ಸಿಗುವುದೇ ಇಲ್ಲ ಎಂಬ ಪರಿಸ್ಥಿತಿ ಇಲ್ಲ ಎಂದು ಮೂಲವೊಂದು ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.