ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಿಲಯನ್ಸ್‌ ಜುವೆಲ್ಸ್‌ನ ‘ವಿವಾಹಂ’ ಸಂಗ್ರಹ ಅನಾವರಣ

Published 7 ಜೂನ್ 2024, 16:25 IST
Last Updated 7 ಜೂನ್ 2024, 16:25 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಪ್ರಮುಖ ಆಭರಣ ಬ್ರ್ಯಾಂಡ್‌ ಆದ ರಿಲಯನ್ಸ್‌ ಜ್ಯುವೆಲ್ಸ್‌ ವಧುವಿಗಾಗಿ ‘ವಿವಾಹಂ’ ಸಂಗ್ರಹವನ್ನು ಅನಾವರಣಗೊಳಿಸಿದೆ.

ಈ ಸಂಗ್ರಹವು ಕರ್ನಾಟಕ, ದೆಹಲಿ, ಉತ್ತರ ಪ್ರದೇಶ, ಬಿಹಾರ, ಒಡಿಶಾ, ಪಂಜಾಬ್, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶದ ಸಾಂಸ್ಕೃತಿಕ ಪರಂಪರೆ ಪ್ರತಿಬಿಂಬಿಸುವ 14ಕ್ಕೂ ಹೆಚ್ಚು ವೈವಿಧ್ಯಮಯ ಆಭರಣಗಳನ್ನು ಒಳಗೊಂಡಿದೆ.

ಚೋಕರ್ ಹಾರಗಳು, ಉದ್ದನೆಯ ಹಾರಗಳು, ಬಳೆಗಳು, ಮಾಂಗ್ಟಿಕ್ಕಾ, ಉಂಗುರಗಳು, ಹಣೆ ಪಟ್ಟಿ, ಕಿವಿಯೋಲೆಗಳು, ತೋಳು ಬಂದಿ ಮತ್ತು ಸೊಂಟದ ಪಟ್ಟಿಗಳು ಈ ಸಂಗ್ರಹದಲ್ಲಿದ್ದು, ಚಿನ್ನ ಮತ್ತು ವಜ್ರದಿಂದ ರೂಪಿಸಲಾಗಿದೆ ಎಂದು ಕಂಪನಿಯು ತಿಳಿಸಿದೆ.

ರಿಲಯನ್ಸ್‌ ಜ್ಯುವೆಲ್ಸ್‌ ಕಂಪನಿಯು ಈ ಸಂಗ್ರಹದ ಜೊತೆಗೆ ‘ದಿ ಕ್ವೀನ್ ಇನ್ ಯುʼ ಅಭಿಯಾನ ಆರಂಭಿಸಿದೆ. ವಿವಾಹಂ ಸಂಗ್ರಹದ ಆಭರಣಗಳನ್ನು ಭಾರತೀಯ ವಧುವಿನ ವೈಯಕ್ತಿಕ ಶೈಲಿ ಮತ್ತು ಆದ್ಯತೆಗಳಿಗೆ ಸರಿಹೊಂದುವಂತೆ ವಿನ್ಯಾಸಗೊಳಿಸಲಾಗಿದ್ದು, ವಿಭಿನ್ನ ಶ್ರೇಣಿಯಲ್ಲಿ ದೊರೆಯುತ್ತವೆ.  

‘ದೇಶದ ವಿವಿಧ ಪ್ರದೇಶದಲ್ಲಿರುವ ವಧುಗಳ ಅಗತ್ಯ ಪೂರೈಸಲು ವೈವಿಧ್ಯಮಯ ವಿನ್ಯಾಸಗಳೊಂದಿಗೆ  ಈ ಸಂಗ್ರಹವನ್ನು ವಿನ್ಯಾಸಗೊಳಿಸಲಾಗಿದೆ’ ಎಂದು ರಿಲಯನ್ಸ್ ಜ್ಯುವೆಲ್ಸ್‌ನ ಸಿಇಒ ಸುನಿಲ್ ನಾಯಕ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT