ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಕೈಂಡ್ ಬ್ರ್ಯಾಂಡ್ ಅನಾವರಣ

Published 13 ಜೂನ್ 2024, 16:29 IST
Last Updated 13 ಜೂನ್ 2024, 16:29 IST
ಅಕ್ಷರ ಗಾತ್ರ

ಬೆಂಗಳೂರು: ರಿಲಯನ್ಸ್‌ ರಿಟೇಲ್‌ಗೆ ಸೇರಿದ ಸೌಂದರ್ಯ ರಿಟೇಲ್‌ ಫ್ಲಾಟ್‌ ಫಾರ್ಮ್ ಟಿರಾ ಚರ್ಮರಕ್ಷಣೆ ಬ್ರ್ಯಾಂಡ್ ಆದ ‘ಅಕೈಂಡ್‌’ ಅನ್ನು ಬಿಡುಗಡೆ ಮಾಡಿದೆ.

ಅಕೈಂಡ್ ಸಹ ಸಂಸ್ಥಾಪಕಿ ಮೀರಾ ಕಪೂರ್ ಅವರು, ಮುಂಬೈನ ಜಿಯೊ ವರ್ಲ್ಡ್ ಡ್ರೈವ್‌ನಲ್ಲಿನ ಟಿರಾ ಮಳಿಗೆಯಲ್ಲಿ ‘ಅಕೈಂಡ್’ ಅನ್ನು ಅನಾವರಣ ಮಾಡಿದರು.

ಪ್ರತಿ ವ್ಯಕ್ತಿಯೂ ತನ್ನ ಚರ್ಮದ ಆರೈಕೆ ಬಗ್ಗೆ ವಿಶೇಷ ಕಾಳಜಿ ತೆಗೆದುಕೊಳ್ಳಬೇಕು ಹಾಗೂ ಪ್ರತ್ಯೇಕವಾಗಿ‌ ಆರೈಕೆ ಮಾಡಬೇಕಾಗುತ್ತದೆ. ಈ ಸಂಗತಿ ‘ಅಕೈಂಡ್’ ಅರ್ಥ ಮಾಡಿಕೊಳ್ಳುತ್ತದೆ. ಪ್ರತಿ ವ್ಯಕ್ತಿಯ ಚರ್ಮದ  ಅಗತ್ಯತೆ ಅರಿತು, ಆರೈಕೆಯನ್ನು ಸರಳಗೊಳಿಸುತ್ತದೆ ಎಂದು ಕಂಪನಿ ತಿಳಿಸಿದೆ.

ಇದರಲ್ಲಿ ಬಿಲ್ಡ್, ಬ್ಯಾಲನ್ಸ್ ಹಾಗೂ ಡಿಫೆನ್ಸ್ ಶ್ರೇಣಿಗಳಿವೆ. ಬಿಲ್ಡ್, ಚರ್ಮದ ಅಡೆತಡೆ ನಿವಾರಿಸಿ, ಅದರ ಸಹಜ ಸ್ಥಿತಿಗೆ ತರುವ ಕಡೆಗೆ ಗಮನ ಕೇಂದ್ರೀಕರಿಸುತ್ತದೆ. ಇನ್ನು ಎರಡನೆಯ ಶ್ರೇಣಿ ಚರ್ಮದ ಅಡೆತಡೆಗಳನ್ನು ಉತ್ತಮವಾಗಿ ನಿರ್ವಹಿಸುತ್ತದೆ ಹಾಗೂ ಯಥಾಸ್ಥಿತಿಯಲ್ಲಿ  ಇರಿಸುತ್ತದೆ. ಅದರ ಫಲಿತವಾಗಿ ಆರೋಗ್ಯ ಪೂರ್ಣ,  ಹೊಳೆಯುವಂಥ ಚರ್ಮವನ್ನು ಕಾಪಾಡುತ್ತದೆ.  ಇನ್ನು ಮೂರನೆಯ ಶ್ರೇಣಿಯು ಮಾಲಿನ್ಯ, ಜೀವನಶೈಲಿ ಸಂಗತಿಗಳು ಹಾಗೂ ಸೂರ್ಯನ ಕಿರಣಗಳಿಂದ ಆಗುವಂತಹ ಹಾನಿಯಿಂದ ತಡೆಯಲು ಸಹಾಯ ಮಾಡುತ್ತದೆ ಎಂದು ತಿಳಿಸಿದೆ.

‘ಟಿರಾದ ಮೊದಲ ಚರ್ಮ ಆರೈಕೆ ಬ್ರ್ಯಾಂಡ್ ಆದ ‘ಅಕೈಂಡ್’ ಅನ್ನು ಸ್ವಂತ ಬ್ರಾಂಡ್‌ಗಳ ಪೋರ್ಟ್‌ ಫೋಲಿಯೊದಲ್ಲಿ ಪರಿಚಯಿಸಲು ಉತ್ಸುಕರಾಗಿದ್ದೇವೆ. ಈಗ ಮಾಡಿರುವ  ಉತ್ಪನ್ನದ ಬಿಡುಗಡೆಯು  ಟಿರಾದ ಪಯಣದಲ್ಲಿ ಮಹತ್ವದ  ಮೈಲಿಗಲ್ಲು ಎನಿಸುತ್ತದೆ. ನಾವೀನ್ಯ ಮತ್ತು ಉತ್ಕೃಷ್ಟತೆಗೆ  ಬದ್ಧರಾಗಿರುತ್ತೇವೆ. ಪ್ರತಿ ಕೊಡುಗೆಯು  ನಮ್ಮ ಗ್ರಾಹಕರ ಸೌಂದರ್ಯದ ಅನುಭವವನ್ನು ಹೆಚ್ಚಿಸುತ್ತದೆ’ ಎಂದು ರಿಲಯನ್ಸ್ ರಿಟೇಲ್‌  ವೆಂಚರ್ಸ್ ಲಿಮಿಟೆಡ್‌ನ ಕಾರ್ಯ ನಿರ್ವಾಹಕ ನಿರ್ದೇಶಕಿ ಇಶಾ ಅಂಬಾನಿ ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT