ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಲಯನ್ಸ್‌ ರಿಟೇಲ್‌: ಸಿಲ್ವರ್‌ ಲೇಕ್‌ನಿಂದ ₹ 7,500 ಕೋಟಿ ಹೂಡಿಕೆ

Last Updated 26 ಸೆಪ್ಟೆಂಬರ್ 2020, 10:49 IST
ಅಕ್ಷರ ಗಾತ್ರ

ನವದೆಹಲಿ: ರಿಲಯನ್ಸ್‌ ರಿಟೇಲ್‌ ವೆಂಚರ್ಸ್‌ ಲಿಮಿಟೆಡ್‌ನಲ್ಲಿ (ಆರ್‌ಆರ್‌ವಿಎಲ್‌) ಅಮೆರಿಕದ ಸಿಲ್ವರ್‌ ಲೇಕ್‌ ಪಾರ್ಟ್ನರ್ಸ್‌ ಕಂಪನಿಯು ₹ 7,500 ಕೋಟಿ ಹೂಡಿಕೆ ಮಾಡಿದೆ ಎಂದು ರಿಲಯನ್ಸ್‌ ಇಂಡಸ್ಟ್ರಿಸ್‌ ಶನಿವಾರ ತಿಳಿಸಿದೆ.

ಆರ್‌ಆರ್‌ವಿಎಲ್‌ನ ಶೇ 1.75ರಷ್ಟು ಷೇರುಗಳನ್ನು ಖರೀದಿಸುವ ಮೂಲಕ ಸಿಲ್ವರ್‌ ಲೇಕ್‌ ಈ ಹೂಡಿಕೆ ಮಾಡಿದೆ ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ. ಈ ಹೂಡಿಕೆಯಿಂದಾಗಿ ಆರ್‌ಆರ್‌ವಿಎಲ್‌ನ ಮೌಲ್ಯ ₹ 4.21 ಲಕ್ಷ ಕೋಟಿಗಳಷ್ಟಾಗಿದೆ.

ರಿಲಯನ್ಸ್‌ನ ಅಂಗಸಂಸ್ಥೆಯಲ್ಲಿ ಸಿಲ್ವರ್‌ ಲೇಕ್‌ ಮಾಡುತ್ತಿರುವ ಎರಡನೇ ಹೂಡಿಕೆ ಇದಾಗಿದೆ. ಈ ಮೊದಲು ರಿಲಯನ್ಸ್‌ ಜಿಯೊದಲ್ಲಿ ₹ 9,855 ಕೋಟಿ ಹೂಡಿಕೆ ಮಾಡಿತ್ತು.

ದೇಶದಲ್ಲಿ ತನ್ನ ರಿಟೇಲ್‌ ವಹಿವಾಟು ವಿಸ್ತರಿಸಿಕೊಳ್ಳುವ ಭಾಗವಾಗಿ ಆಗಸ್ಟ್‌ನಲ್ಲಿ ರಿಲಯನ್ಸ್‌ ಕಂಪನಿಯು ಫ್ಯೂಚರ್‌ ಗ್ರೂಪ್‌ನ ರಿಟೇಲ್‌ ಮತ್ತು ಲಾಜಿಸ್ಟಿಕ್‌ ವಹಿವಾಟನ್ನು ₹ 24,713 ಕೋಟಿಗೆ ವಶಪಡಿಸಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT