ಶನಿವಾರ, ಡಿಸೆಂಬರ್ 7, 2019
21 °C

ರಾಯಲ್ ಎನ್‌ಫೀಲ್ಡ್‌: 2 ಹೊಸ ಬೈಕ್‌

Published:
Updated:
Deccan Herald

ಬೆಂಗಳೂರು: ರಾಯಲ್ ಎನ್‌ಫೀಲ್ಡ್‌ ಕಂಪನಿಯು ಇಂಟರ್‌ಸೆಪ್ಟರ್‌ ಐಎನ್‌ಟಿ 650 ಮತ್ತು ಕಾಂಟಿನೆಂಟಲ್‌ ಜಿಟಿ650  ಹೆಸರಿನ ಎರಡು ಹೊಸ ಬೈಕ್‌ಗಳನ್ನು ರಾಜ್ಯದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

‘ಕರ್ನಾಟಕ ಅದರಲ್ಲಿಯೂ ಮುಖ್ಯವಾಗಿ ಬೆಂಗಳೂರು ಮಾರುಕಟ್ಟೆ ನಮ್ಮ ಮೊದಲ ಆದ್ಯತೆ. ಹೀಗಾಗಿ ಬೇರೆಲ್ಲಾ ಕಡೆಗಳಿಗಿಂತಲೂ ಕಡಿಮೆ ಎಕ್ಸ್‌ ಷೋರೂಂ ದರ ನೀಡಿದ್ದೇವೆ. ರಾಜ್ಯದಲ್ಲಿ ಇಂಟರ್‌ಸೆಪ್ಟರ್‌ ಐಎನ್‌ಟಿ 650 ಎಕ್ಸ್‌ ಷೋರೂಂ ಬೆಲೆ ₹2.34 ಲಕ್ಷ ರಿಂದ ಆರಂಭವಾಗುತ್ತದೆ. ಬೇರೆ ರಾಜ್ಯಗಳಲ್ಲಿ ಇದು ₹ 2.50 ಲಕ್ಷದಿಂದ ಆರಂಭವಾಗುತ್ತದೆ. ಕಾಂಟಿನೆಂಟಲ್‌ ಜಿಟಿ650 ಎಕ್ಸ್‌ ಷೋರೂಂ ಬೆಲೆ ರಾಜ್ಯದಲ್ಲಿ ₹ 2.49 ಲಕ್ಷದಿಂದ ಆರಂಭವಾದರೆ, ಬೇರೆ ರಾಜ್ಯಗಳಲ್ಲಿ ₹ 2.60 ಲಕ್ಷದಿಂದ ಆರಂಭವಾಗುತ್ತದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು