ಬುಧವಾರ, ಏಪ್ರಿಲ್ 8, 2020
19 °C

ರೂಪಾಯಿ ಮೌಲ್ಯ ವರ್ಷದಲ್ಲಿ ಶೇ 5ರಷ್ಟು ಕುಸಿತ; ಇಳಿಕೆಯತ್ತ ದೇಶದ ವೃದ್ಧಿ ದರ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ರೂಪಾಯಿ ಮೌಲ್ಯ ಕುಸಿತ

ಭಾರತದ ಆರ್ಥಿಕತೆ ಆರು ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ ಎಂಬುದಕ್ಕೆ ಸಾಕ್ಷಿಯಂತೆ ರೂಪಾಯಿ ಮೌಲ್ಯವೂ ನಿರಂತರ ಕುಸಿತ ಕಂಡಿದೆ. ಏಷ್ಯಾದ ಉತ್ತೇಜನಗೊಳ್ಳುತ್ತಿರುವ ಕರೆನ್ಸಿಗಳ ಪೈಕಿ ಪ್ರಸಕ್ತ ತ್ರೈಮಾಸಿಕದಲ್ಲಿ ಕುಸಿತದತ್ತ ಸಾಗಿರುವ ಕರೆನ್ಸಿ ಭಾರತದ ರೂಪಾಯಿ ಎಂದು ಬ್ಲೂಮ್‌ಬರ್ಗ್‌ ವರದಿ ಮಾಡಿದೆ. 

ಈ ವರ್ಷ ರೂಪಾಯಿ ಮೌಲ್ಯ ಶೇ 5ರಷ್ಟು ಇಳಿಕೆಯಾಗಿದೆ. ಆರ್ಥಿಕ ಪ್ರಗತಿಯಲ್ಲಿನ ಮಂದಗತಿಯು ನಿರೀಕ್ಷೆಗಿಂತ ಹೆಚ್ಚಿನ ಅವಧಿಗೆ ಮುಂದುವರೆಯಲಿದೆ. ಹೀಗಾಗಿ ಹಿಂದೆ ಅಂದಾಜಿಸಿದ್ದ ಶೇ 5.8ರಷ್ಟು ವೃದ್ಧಿ ದರದ ಮುನ್ನೋಟವನ್ನು ಮೂಡೀಸ್‌ ಇನ್‌ವೆಸ್ಟರ್ಸ್‌ ಸರ್ವಿಸ್‌ ಕೆಳಮುಖವಾಗಿ ಪರಿಷ್ಕರಿಸಿತ್ತು. ವೃದ್ಧಿ ದರವು ಶೇ 4.2ಕ್ಕೆ ಕುಸಿಯಲಿದೆ ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಸಹ ಅಂದಾಜಿಸಿದೆ.

'ಅಭಿವೃದ್ಧಿ ಕುಂಠಿತಗೊಂಡಿರುವುದು ಭಾರತಕ್ಕೆ ಬಹುದೊಡ್ಡ ತಡೆಯಾಗಿದೆ. ಅಭಿವೃದ್ಧಿಗೆ ಪೂರಕವಲ್ಲದ ವಾತಾವರಣದ ಪರಿಣಾಮದಿಂದ ಬಂಡವಾಳ ಹರಿಯುವಿಕೆಯು ಇಳಿಕೆಯಾಗಬಹುದು. ಇದು ಕರೆನ್ಸಿ ಮೌಲ್ಯದ ಮೇಲೆ ಪ್ರಭಾವ ಬೀರುತ್ತದೆ‘ ಎಂದು ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ ಲಿಮಿಟೆಡ್‌ನ ಮುಖ್ಯ ಆರ್ಥಿಕತಜ್ಞ ಇಂದ್ರಾನಿಲ್‌ ಪಾನ್‌ ಅಭಿಪ್ರಾಯ ಪಟ್ಟಿದ್ದಾರೆ. 

ಇದನ್ನೂ ಓದಿ: ಜಿಡಿಪಿ ಶೇ 5ರಷ್ಟಕ್ಕೆ ಕುಸಿತ ಕಂಡಿಲ್ಲ: ಅನುರಾಗ್‌ ಠಾಕೂರ್‌

ನವೆಂಬರ್‌ ಆರಂಭದಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ ₹72.2425ಕ್ಕೆ ಕುಸಿದಿತ್ತು. ಸೆಪ್ಟೆಂಬರ್‌ನಲ್ಲಿ ₹72.4075ಕ್ಕೆ ಇಳಿದಿತ್ತು. ಸೋಮವಾರ ರೂಪಾಯಿ ಮೌಲ್ಯ ₹71.6425 ಇದೆ. 

ನವೆಂಬರ್‌ 29ರಂದು ಭಾರತ ಸರ್ಕಾರ ಆರ್ಥಿಕ ವೃದ್ಧಿ ದರ(ಜಿಡಿಪಿ) ವರದಿಯನ್ನು ಪ್ರಕಟಿಸಲಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು