ಶುಕ್ರವಾರ, ಮೇ 20, 2022
23 °C
ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಸೋಮವಾರ ವಿವರಣೆ ನೀಡುವಂತೆ ಸೂಚನೆ

ಐ.ಟಿ. ಪೋರ್ಟಲ್‌: ಖುದ್ದು ವಿವರ ನೀಡಲು ಪಾರೇಖ್‌ಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

pti photo

ನವದೆಹಲಿ (ಪಿಟಿಐ): ಹೊಸ ಐ.ಟಿ. ಪೋರ್ಟಲ್‌ ಬಳಕೆಗೆ ಬಂದು ಎರಡು ತಿಂಗಳು ಕಳೆದರೂ ತಾಂತ್ರಿಕ ದೋಷಗಳು ಮುಂದುವರಿದಿರುವ ಕುರಿತು ಖುದ್ದಾಗಿ ವಿವರಣೆ ನೀಡುವಂತೆ ಕೇಂದ್ರ ಹಣಕಾಸು ಸಚಿವಾಲಯವು ಇನ್ಫೊಸಿಸ್‌ ಸಿಇಒ ಸಲೀಲ್‌ ಪಾರೇಖ್‌ ಅವರಿಗೆ ಸೂಚಿಸಿದೆ.

ಸತತ ಎರಡು ದಿನಗಳಿಂದ ಪೋರ್ಟಲ್‌ ಬಳಕೆಗೆ ಲಭ್ಯವಾಗದ ಬೆನ್ನಲ್ಲೇ ಸಚಿವಾಲಯವು ಈ ಕ್ರಮ ಕೈಗೊಂಡಿದೆ. ಸಮಸ್ಯೆಗಳ ಕುರಿತಾಗಿ ಪಾರೇಖ್ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಸೋಮವಾರ ವಿವರಣೆ ನೀಡಬೇಕಿದೆ.

‘ಆದಾಯ ತೆರಿಗೆ ಇಲಾಖೆಯ ಜಾಲತಾಣವು ತುರ್ತು ನಿರ್ವಹಣೆಯಲ್ಲಿದೆ. ಅದು ಬಳಕೆಗೆ ಲಭ್ಯವಾದ ಬಳಿಕ ಆ ಬಗ್ಗೆ ತೆರಿಗೆ ಪಾವತಿದಾರರಿಗೆ ಮಾಹಿತಿ ನೀಡಲಾಗುವುದು. ಅಡಚಣೆಗಾಗಿ ವಿಷಾದಿಸುತ್ತೇವೆ’ ಎಂದು ಇನ್ಫೊಸಿಸ್‌ ಭಾನುವಾರ ಟ್ವೀಟ್‌ ಮಾಡಿದೆ.

ಐ.ಟಿ. ವಿವರ ಸಲ್ಲಿಸಲು ಇನ್ಫೊಸಿಸ್‌ ಅಭಿವೃದ್ಧಿಪಡಿಸಿರುವ www.incometax.gov.in ಪೋರ್ಟಲ್‌ ಅನ್ನು ಜೂನ್‌7ರಂದು ಬಿಡುಗಡೆ ಮಾಡಲಾಗಿತ್ತು. ಆ ದಿನದಿಂದಲೂ ಒಂದಲ್ಲ ಒಂದು ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಲೇ ಇವೆ. ಈ ಕಾರಣದಿಂದಾಗಿ ಆದಾಯ ತೆರಿಗೆ ಇಲಾಖೆಯು ಮ್ಯಾನುಯಲ್‌ ಫೈಲಿಂಗ್‌ಗೆ ಅವಕಾಶ ನೀಡ
ಬೇಕಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು