₹2 ಕೋಟಿಗಿಂತ ಕಡಿಮೆ ಮೊತ್ತದ ಠೇವಣಿ ಬಡ್ಡಿ ದರ ಹೆಚ್ಚಿಸಿದ ಎಸ್‌ಬಿಐ

ಬೆಂಗಳೂರು: ₹ 2 ಕೋಟಿಗಿಂತ ಕಡಿಮೆ ಮೊತ್ತದ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಎಸ್‌ಬಿಐ ಹೆಚ್ಚಿಸಿದೆ. ಇದು ಶನಿವಾರದಿಂದ ಜಾರಿಗೆ ಬರಲಿದೆ.
ವಿವಿಧ ಅವಧಿಯ ಠೇವಣಿಗಳ ಮೇಲಿನ ಬಡ್ಡಿ ದರವು ಕನಿಷ್ಠ ಶೇ 0.25ರಿಂದ ಗರಿಷ್ಠ ಶೇ 0.80ರವರೆಗೆ ಹೆಚ್ಚಲಿದೆ ಎಂದು ಎಸ್‌ಬಿಐ ತಿಳಿಸಿದೆ.
ಏರಿಕೆ ವಿವರ: 46ರಿಂದ 179 ದಿನಗಳವರೆಗಿನ ಠೇವಣಿಗೆ ಹೊಸ ಬಡ್ಡಿ ದರ ಶೇ 4.50. 180ರಿಂದ 210 ದಿನಗಳವರೆಗಿನ ಠೇವಣಿಗೆ ಶೇ 5.25. 211ದಿನಗಳಿಂದ 1 ವರ್ಷದೊಳಗಿನ ಠೇವಣಿಗೆ ಶೇ 5.50. 1–2 ವರ್ಷಗಳು ಶೇ 6.10. 2–3 ವರ್ಷಗಳು ಶೇ 6.25. 3–5 ವರ್ಷಗಳು ಹಾಗೂ 5–10 ವರ್ಷಗಳು ಶೇ 6.10.
ಹಿರಿಯ ನಾಗರಿಕರಿಗೆ 3–5 ವರ್ಷಗಳ ಠೇವಣಿಗೆ ಶೇ 6.60ರಷ್ಟು, 5–10 ವರ್ಷಗಳ ಠೇವಣಿಗೆ ಶೇ 6.90ರಷ್ಟು ಬಡ್ಡಿ ಸಿಗಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.