ಮುಂಬೈ: ಎಲ್ಲ ಬಗೆಯ ಹಣಕಾಸಿನ ಸೇವೆಗಳಿಗೆ ಅಕೌಂಟ್ ಅಗ್ರಿಗೇಟರ್ಗಳು ಗ್ರಾಹಕರಿಂದ ಒಂದೇ ಬಾರಿಗೆ ಸಹಮತ ಪಡೆಯುವ ವ್ಯವಸ್ಥೆಯ ಬಗ್ಗೆ ಎಸ್ಬಿಐ ವ್ಯವಸ್ಥಾಪಕ ನಿರ್ದೇಶಕ ಅಶ್ವಿನಿ ಕುಮಾರ್ ತಿವಾರಿ ಕಳವಳ ವ್ಯಕ್ತಪಡಿಸಿದ್ದಾರೆ.

ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಹೆಚ್ಚಿನ ಗ್ರಾಹಕರು ಸಹಮತ ನೀಡುವ ಮೊದಲು ಎಲ್ಲ ವಿವರಗಳನ್ನು ಗಮನಿಸುವುದಿಲ್ಲ, ಅವರು ವಿವರಗಳನ್ನು ಅರ್ಥ ಮಾಡಿಕೊಳ್ಳದೆಯೇ ಒಪ್ಪಿಗೆ ನೀಡುತ್ತಾರೆ’ ಎಂದು ಹೇಳಿದ್ದಾರೆ.

ಅಕೌಂಟ್ ಅಗ್ರಿಗೇಟರ್ಗಳು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ನಿಯಂತ್ರಣಕ್ಕೆ ಒಳಪಟ್ಟಿರುವ ಸಂಸ್ಥೆಗಳಾಗಿದ್ದು, ಗ್ರಾಹಕರ ಸಹಮತದ ಆಧಾರದಲ್ಲಿ ಅವರ ಕುರಿತಾದ ದತ್ತಾಂಶ ಒದಗಿಸುವ ಕೆಲಸ ಮಾಡುತ್ತವೆ.

ಹಣಕಾಸು ಸಂಸ್ಥೆಗಳ ನಡುವೆ ದತ್ತಾಂಶವನ್ನು ಹಂಚಿಕೊಳ್ಳುವ ಪ್ರಕ್ರಿಯೆಯು ಸುಲಭವಾಗಬೇಕು ಎಂಬ ಉದ್ದೇಶದಿಂದ ಅಕೌಂಟ್ ಅಗ್ರಿಗೇಟರ್ ವ್ಯವಸ್ಥೆಯನ್ನು ಆರ್ಬಿಐ ಜಾರಿಗೆ ತಂದಿದೆ. ದತ್ತಾಂಶವನ್ನು ಹಂಚಿಕೊಳ್ಳುವುದು ಸುಲಭವಾದಾಗ ತೀರ್ಮಾನ ತೆಗೆದುಕೊಳ್ಳುವ ಪ್ರಕ್ರಿಯೆಯು ವೇಗ ಪಡೆದುಕೊಳ್ಳುತ್ತದೆ. ಈಗ ಅಕೌಂಟ್ ಅಗ್ರಿಗೇಟರ್ ವ್ಯವಸ್ಥೆಯನ್ನು 22.5 ಕೋಟಿ ಜನ ಬಳಸುತ್ತಿದ್ದಾರೆ.

ಸಾಲ ನೀಡುವುದಕ್ಕೆ, ಸಂಪತ್ತು ನಿರ್ವಹಣಾ ಸೇವೆಗಳನ್ನು ಒದಗಿಸುವುದಕ್ಕೆ ಸೇರಿದಂತೆ ಹಲವು ಬಗೆಯ ಹಣಕಾಸಿನ ಸೇವೆಗಳನ್ನು ಒದಗಿಸಲು ಗ್ರಾಹಕರಿಂದ ಒಂದೇ ಬಾರಿಗೆ ಒಪ್ಪಿಗೆ ಪಡೆಯಲಾಗುತ್ತಿದೆ ಎಂದು ತಿವಾರಿ ಅವರು ಹೇಳಿದ್ದಾರೆ.

‘ಗ್ರಾಹಕರಿಂದ ಒಂದು ಬಾರಿ ಮಾತ್ರ ಒಪ್ಪಿಗೆ ಪಡೆಯಲಾಗುತ್ತದೆ. ಗ್ರಾಹಕರು ಒಪ್ಪಿಗೆ ನೀಡುವ ಮೊದಲು ವಿವರಗಳನ್ನು ಗಮನಿಸುವುದಿಲ್ಲ. ವಿವರಗಳನ್ನು ಅರ್ಥ ಮಾಡಿಕೊಳ್ಳದೆಯೇ ಅವರು ಒಪ್ಪಿಗೆ ನೀಡಿರುತ್ತಾರೆ. ಇದು ನನ್ನಲ್ಲಿ ಒಂದಿಷ್ಟು ಕಳವಳ ಮೂಡಿಸಿದೆ. ಅರ್ಥ ಮಾಡಿಕೊಳ್ಳದೆಯೇ ಒಪ್ಪಿಗೆ ನೀಡುವುದು ಸರಿಯೇ? ಬಹುಶಃ ಸರಿಯಲ್ಲ’ ಎಂದು ತಿವಾರಿ ಹೇಳಿದ್ದಾರೆ.

ಈ ಸಮಸ್ಯೆಗೆ ಸರಿಯಾದ ಪರಿಹಾರ ಕಂಡುಕೊಳ್ಳುವಲ್ಲಿ ದೇಶದ ಫಿನ್ಟೆಕ್ ಉದ್ಯಮ ವಲಯದ ಸ್ವಯಂ ನಿಯಂತ್ರಣ ಸಂಸ್ಥೆಗಳು (ಎಸ್ಆರ್ಒ) ಯಶಸ್ಸು ಕಂಡಿಲ್ಲ ಎಂದು ಕೂಡ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.