ಸೋಮವಾರ, ಮೇ 17, 2021
25 °C

ಯೆಸ್‌ ಬ್ಯಾಂಕ್‌ಗೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ ದಂಡ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಯೆಸ್‌ ಬ್ಯಾಂಕ್‌ಗೆ ಸೋಮವಾರ ₹ 25 ಕೋಟಿ ದಂಡ ವಿಧಿಸಿದೆ. ಯೆಸ್‌ ಬ್ಯಾಂಕ್‌ ಕೆಲವು ವರ್ಷಗಳ ಹಿಂದೆ ಎಟಿ–1 ಬಾಂಡ್‌ಗಳನ್ನು ತಪ್ಪಾಗಿ ಮಾರಾಟ ಮಾಡಿದ್ದಕ್ಕೆ ಸಂಬಂಧಿಸಿದಂತೆ ಈ ದಂಡ ವಿಧಿಸಲಾಗಿದೆ.

ಎಟಿ–1 ಬಾಂಡ್‌ಗಳು ನಿಶ್ಚಿತ ಠೇವಣಿಗಿಂತ (ಎಫ್‌.ಡಿ.) ಹೆಚ್ಚಿನ ಬಡ್ಡಿ ತಂದುಕೊಡುತ್ತವೆ ಎಂದು ಹೇಳಿ ಮಾರಾಟ ಮಾಡಲಾಗಿತ್ತು. ಆದರೆ, ಮಾರಾಟ ಮಾಡುವ ಸಂದರ್ಭದಲ್ಲಿ ಈ ಬಾಂಡ್‌ಗಳ ವಿಚಾರವಾಗಿ ಇರುವ ಎಲ್ಲ ರಿಸ್ಕ್‌ಗಳ ಬಗ್ಗೆ ವೈಯಕ್ತಿಕವಾಗಿ ಹೂಡಿಕೆ ಮಾಡುವವರಿಗೆ ಮಾಹಿತಿ ನೀಡಿರಲಿಲ್ಲ ಎಂದು ಸೆಬಿ ಹೇಳಿದೆ.

‘ಹೂಡಿಕೆದಾರರಿಗೆ, ಗ್ರಾಹಕರಿಗೆ ಎಟಿ–1 ಬಾಂಡ್‌ ಬಗ್ಗೆ ಅಗತ್ಯ ವಿವರ ನೀಡದಿರುವುದರಿಂದ ಮಾಹಿತಿಯನ್ನು ಮುಚ್ಚಿಟ್ಟಂತೆ ಆಗಿದೆ. ತಪ್ಪು ಮಾಹಿತಿ ನೀಡಿದ್ದರಿಂದ ಹೂಡಿಕೆದಾರರು ಹಾಗೂ ಗ್ರಾಹಕರ ಮೇಲೆ ಪ್ರಭಾವ ಉಂಟಾಯಿತು. ಅವರು ಈ ಬಾಂಡ್‌ ಖರೀದಿ ಮಾಡುವ ಆಮಿಷಕ್ಕೆ ಒಳಗಾದರು. ಕೆಲವು ಗ್ರಾಹಕರು ತಮ್ಮ ಎಫ್.ಡಿ. ಹಣ ಹಿಂದಕ್ಕೆ ಪಡೆದು ಈ ಬಾಂಡ್‌ ಖರೀದಿಸಿದ್ದರು’ ಎಂದು ಕೂಡ ಸೆಬಿ ಹೇಳಿದೆ.

ಇವೆಲ್ಲವೂ ಹೂಡಿಕೆದಾರರ ವಿಚಾರದಲ್ಲಿ ಎಸಗಿದ ವಂಚನೆ ಎಂದು ಸೆಬಿ ಅಭಿಪ್ರಾಯ ವ್ಯಕ್ತಪಡಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು