ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಬೆಳವಣಿಗೆ ತಗ್ಗಿಸಲಿದೆ ಎರಡನೇ ಅಲೆ: ಎಸ್‌ಆ್ಯಂಡ್‌ಪಿ

Last Updated 28 ಏಪ್ರಿಲ್ 2021, 12:15 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ಸಾಂಕ್ರಾಮಿಕದ ಎರಡನೇ ಅಲೆಯು ಭಾರತದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಬೆಳವಣಿಗೆಯ ಮೇಲೆ ಪರಿಣಾಮ ಉಂಟುಮಾಡಲಿದ್ದು, ವ್ಯಾಪಾರ–ವಹಿವಾಟುಗಳಿಗೆ ಅಡೆತಡೆಗಳನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆ ಇದೆ ಎಂದು ಎಸ್‌ಆ್ಯಂಡ್‌ಪಿ ಗ್ಲೋಬಲ್‌ ರೇಟಿಂಗ್ಸ್‌ ಬುಧವಾರ ಹೇಳಿದೆ.

ಎರಡನೇ ಅಲೆಯು ಅನಿಶ್ಚಿತ ಸ್ಥಿತಿ ಸೃಷ್ಟಿಸಿದ್ದು, ಆರ್ಥಿಕ ಚೇತರಿಕೆಗೆ ಅಡ್ಡಿ ಉಂಟುಮಾಡಲಿದೆ ಎಂದೂ ಹೇಳಿದೆ. ಸರ್ಕಾರವು ವ್ಯಾಪಕ ನಿರ್ಬಂಧ ಕ್ರಮಗಳನ್ನು ಮತ್ತೆ ಜಾರಿಗೊಳಿಸುವ ಸ್ಥಿತಿ ಉಂಟಾದರೆ, 2021–22ನೇ ಹಣಕಾಸು ವರ್ಷಕ್ಕೆ ಜಿಡಿಪಿ ಬೆಳವಣಿಗೆಯ ಅಂದಾಜನ್ನು ಪರಿಷ್ಕರಿಸಬೇಕಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಸಂಸ್ಥೆಯು ತನ್ನ ಈ ಹಿಂದಿನ ಹೇಳಿಕೆಯಲ್ಲಿ ಭಾರತವು 2021–22ರಲ್ಲಿ ಶೇಕಡ 11ರಷ್ಟು ಬೆಳವಣಿಗೆ ಕಾಣಲಿದೆ ಎಂದು ಹೇಳಿತ್ತು.

ಸ್ಥಳೀಯ ಲಾಕ್‌ಡೌನ್‌ಗಳಿಂದಾಗಿ ಸದ್ಯ ದೈನಂದಿನ ಕೆಲಸಗಳು ಮತ್ತು ಆರ್ಥಿಕ ಚಟುವಟಿಕೆಗಳಿಗೆ ಅಡ್ಡಿಯುಂಟಾಗುತ್ತಿದೆ. ಇದು ವರಮಾನ ಸಂಗ್ರಹದ ಚೇತರಿಕೆ ಮತ್ತು ಕೆಲವು ಕಾರ್ಪೊರೇಟ್‌ ವಲಯಗಳ ಗಳಿಕೆಯನ್ನು ತಗ್ಗಿಸಬಹುದು.

ಬ್ಯಾಂಕುಗಳು ಹೆಚ್ಚಿನ ಅಪಾಯ ಎದುರಿಸಬೇಕಾಗಲಿದೆ. ಆಸ್ತಿ ಗುಣಮಟ್ಟವು ಕಡಿಮೆ ಇರಲಿದ್ದು, ವಸೂಲಾಗದ ಸಾಲವು 2021–22ನೇ ಹಣಕಾಸು ವರ್ಷದಲ್ಲಿ ಬ್ಯಾಂಕ್‌ಗಳ ಲಾಭಗಳಿಕೆಯ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT