ಗುರುವಾರ , ಆಗಸ್ಟ್ 18, 2022
25 °C

ಇಂಧನ ಚಿಲ್ಲರೆ ವಹಿವಾಟಿನಲ್ಲಿ ಹೂಡಿಕೆ ತಗ್ಗಲಿದೆ: ಎಫ್‌ಐಪಿಐ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಇಂಧನ ಚಿಲ್ಲರೆ ವಹಿವಾಟಿನಿಂದ ಖಾಸಗಿ ಕಂಪನಿಗಳಿಗೆ ನಷ್ಟವಾಗುತ್ತಿದೆ. ಇದರಿಂದಾಗಿ ಚಿಲ್ಲರೆ ವಹಿವಾಟಿನಲ್ಲಿ ಬಂಡವಾಳ ಹೂಡಿಕೆ ಕಡಿಮೆ ಆಗಲಿದೆ ಎಂದು ಖಾಸಗಿ ಕಂಪನಿಗಳನ್ನು ಪ್ರತಿನಿಧಿಸುವ ಫೆಡರೇಷನ್‌ ಆಫ್‌ ಇಂಡಿಯನ್‌ ಪೆಟ್ರೋಲಿಯಂ ಇಂಡಸ್ಟ್ರಿ (ಎಫ್‌ಐಪಿಐ) ಹೇಳಿದೆ.

ಈ ಸಂಬಂಧ ಈಚೆಗಷ್ಟೇ ಪೆಟ್ರೋಲಿಯಂ ಸಚಿವಾಲಯಕ್ಕೆ ಪತ್ರ ಬರೆದಿದ್ದು, ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಇಂಧನ ದರ ಹೆಚ್ಚಳ ಮಾಡದೇ ಇರುವುದರಿಂದ ಖಾಸಗಿ ಕಂಪನಿಗಳಿಗೆ ನಷ್ಟ ಆಗುತ್ತಿದೆ. ಜಿಯೊ–ಬಿಪಿ ಮತ್ತು ನಯಾರಾ ಎನರ್ಜಿಯಂತಹ ಖಾಸಗಿ ಕಂಪನಿಗಳಿಗೆ ಪ್ರತಿ ಲೀಟರ್‌ ಡೀಸೆಲ್‌ ಮಾರಾಟದಿಂದ ₹ 20 ರಿಂದ ₹ 25 ಮತ್ತು ಪ್ರತಿ ಲೀಟರ್‌ ಪೆಟ್ರೋಲ್‌ ಮಾರಾಟದಿಂದ ₹ 14–18 ನಷ್ಟ ಆಗುತ್ತಿದೆ ಎಂದು ತಿಳಿಸಿದೆ. ಹೂಡಿಕೆಗೆ ಸೂಕ್ತ ವಾತಾವರಣ ಕಲ್ಪಿಸಲು ಮಧ್ಯಪ್ರವೇಶ ಮಾಡುವಂತೆ ಸಚಿವಾಲಯವನ್ನು ಒತ್ತಾಯಿಸಿದೆ.

ಖಾಸಗಿಕ ಕಂಪನಿಗಳು ದರ ಹೆಚ್ಚಿಸುವ ಇಲ್ಲವೇ ಮಾರಾಟ ತಗ್ಗಿಸುವ ಮೂಲಕ ನಷ್ಟವನ್ನು ಕಡಿಮೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ ಎಂದು ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು