ಬೆಂಗಳೂರು: ಶ್ರೀಜಿ ಶಿಪ್ಪಿಂಗ್ ಗ್ಲೋಬಲ್ ಲಿಮಿಟೆಡ್ (ಎಸ್ಎಸ್ಜಿಎಲ್) ಕಂಪನಿಯು ಐಪಿಒ ಮೂಲಕ ಬಂಡವಾಳ ಸಂಗ್ರಹಿಸಲು ಮುಂದಾಗಿದ್ದು, ಆಗಸ್ಟ್ 19ರಿಂದ 21ರವರೆಗೆ ಬಿಡ್ ಸಲ್ಲಿಸಲು ಅವಕಾಶ ಇರಲಿದೆ ಎಂದು ತಿಳಿಸಿದೆ. ಆರಂಭಿಕ ಸಾಂಸ್ಥಿಕ ಹೂಡಿಕೆದಾರರಿಗೆ ಆಗಸ್ಟ್ 18ರಂದು ಬಿಡ್ ಸಲ್ಲಿಸಲು ಅವಕಾಶ ಇರಲಿದೆ.

ಸಣ್ಣ ಹೂಡಿಕೆದಾರರು ಕನಿಷ್ಠ 58 ಷೇರುಗಳಿಗೆ ಬಿಡ್ ಸಲ್ಲಿಸಬೇಕು. ಷೇರುಗಳ ಬೆಲೆಯನ್ನು ₹240-252ಕ್ಕೆ ನಿಗದಿ ಮಾಡಲಾಗಿದೆ. ಐಪಿಒ ಮೂಲಕ ಸಂಗ್ರಹ ಆಗುವ ಬಂಡವಾಳವನ್ನು ಕಂಪನಿಯು ಹಡಗುಗಳ ಖರೀದಿಗೆ ಬಳಸಿಕೊಳ್ಳುವ ಉದ್ದೇಶ ಹೊಂದಿದೆ. ಇದರ ಮೊತ್ತವು ₹251.18 ಕೋಟಿ. ಅಲ್ಲದೆ, ಕಂಪನಿಯು ಪಡೆದುಕೊಂಡಿರುವ ಕೆಲವು ಸಾಲವನ್ನು ಪೂರ್ತಿಯಾಗಿ ಅಥವಾ ಆಂಶಿಕವಾಗಿ ಹಿಂದಿರುಗಿಸಲು ಕೂಡ ಬಂಡವಾಳವನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಇದರ ಮೊತ್ತ ಅಂದಾಜು ₹23 ಕೋಟಿ. ಇನ್ನುಳಿದ ಮೊತ್ತವನ್ನು ಇತರೆ ಕಾರ್ಪೊರೇಟ್ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ಕಂಪನಿಯು ಭಾರತದಲ್ಲಿ ಹಾಗೂ ಶ್ರೀಲಂಕಾದಲ್ಲಿ ಹಲವು ಬಂದರುಗಳಲ್ಲಿ ಕಚ್ಚಾ ವಸ್ತುಗಳ ಸಾಗಣೆ ಸೇವೆಯನ್ನು ಒದಗಿಸುತ್ತದೆ. 2025ರ ಮಾರ್ಚ್ 31ರವರೆಗಿನ ಮಾಹಿತಿ ಪ್ರಕಾರ ಕಂಪನಿಯು ವಿವಿಧ ಗಾತ್ರಗಳ ಒಟ್ಟು 80ಕ್ಕೂ ಹೆಚ್ಚಿನ ಹಡಗುಗಳನ್ನು, ತೇಲುವ ಕ್ರೇನ್ಗಳನ್ನು ಹೊಂದಿದೆ. ಅಲ್ಲದೆ, ಕಂಪನಿಯು 370ಕ್ಕೂ ಹೆಚ್ಚಿನ ಅರ್ಥ್ಮೂವರ್ಗಳನ್ನು ಕೂಡ ಹೊಂದಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಸಿಲೋನ್ ಶಿಪ್ಪಿಂಗ್ ಕಾರ್ಪೊರೇಷನ್ ಲಿಮಿಟೆಡ್, ಅದಾನಿ ಎಂಟರ್ಪ್ರೈಸಸ್ ಲಿಮಿಟೆಡ್, ಟೊರೆಂಟ್ ಪವರ್ ಲಿಮಿಟೆಡ್, ಟಾಟಾ ಇಂಟರ್ನ್ಯಾಷನಲ್ ಲಿಮಿಟೆಡ್, ಆರ್ಎಸ್ಪಿಎಲ್ ಲಿಮಿಟೆಡ್, ಶ್ರೀ ದಿಗ್ವಿಜಯ ಸಿಮೆಂಟ್ ಕಾರ್ಪೊರೇಷನ್ ಲಿಮಿಟೆಡ್, ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್, ಅಂಬುಜಾ ಸಿಮೆಂಟ್ಸ್ ಲಿಮಿಟೆಡ್, ಎಸಿಸಿ ಲಿಮಿಟೆಡ್, ಅಗರ್ವಾಲ್ ಕೋಲ್ ಕಾರ್ಪೊರೇಷನ್ ಪ್ರೈವೇಟ್ ಲಿಮಿಟೆಡ್, ಮೋಹಿತ್ ಮಿನರಲ್ಸ್ ಲಿಮಿಟೆಡ್ನಂತಹ ಕಂಪನಿಗಳು ತನ್ನ ಗ್ರಾಹಕರು ಎಂದು ಶ್ರೀಜಿ ಶಿಪ್ಪಿಂಗ್ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.